ದಾಬಸ್‌ಪೇಟೆ: ‘ಸೋಂಪುರ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳು ರಾಸಾಯನಿಕಯುಕ್ತ ನೀರನ್ನು ಹೊರಗೆಹರಿಸುತ್ತಿ ದ್ದು, ಅದು ಬತ್ತಿದ ಕೊಳವೆ ಬಾವಿಗಳಿಗೆ ತಲುಪುತ್ತಿದೆ’ ಎಂದು ಎಡೇಹಳ್ಳಿ ಗ್ರಾಮಸ್ಥರು ದೂರಿದರು.
ಸೋಂಪುರ ಗ್ರಾಮ ಪಂಚಾಯಿತಿ ವತಿಯಿಂದ ನಿಡವಂದ ಗ್ರಾಮದಲ್ಲಿ ನಡೆದ ಗ್ರಾಮಸಭೆ
ಯಲ್ಲಿ ಈ ಕುರಿತು ಹಲವು ದೂರುಗಳನ್ನು ಗ್ರಾಮಸ್ಥರು ಹೇಳಿಕೊಂಡರು.
‘ಕೈಗಾರಿಕೆಗಳ ರಾಸಾಯನಿಕ ನೀರಿ ನಿಂದ ಅಂತರ್ಜಲ ಕಲುಷಿತ ಗೊಂಡು, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಸೇರುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ರಾಸಾಯನಿಕ ನೀರು ಹರಿಸುತ್ತಿರುವ ಕಂಪನಿಗಳ ವಿರುದ್ದ ಕ್ರಮಕೈಗೊಳ್ಳಬೇಕು’ ಎಂದು ಎಡೇಹಳ್ಳಿ ಗ್ರಾಮಸ್ಥ ಪ್ರದೀಪ್ ಆಗ್ರಹಿಸಿದರು.