‘ಗ್ರಾಮೀಣ ಭಾಗಕ್ಕೂ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಸೌಕರ್ಯ’

7

‘ಗ್ರಾಮೀಣ ಭಾಗಕ್ಕೂ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಸೌಕರ್ಯ’

Published:
Updated:
Deccan Herald

ಬೆಂಗಳೂರು: ‘ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಗ್ರಾಮೀಣ ಭಾಗಗಳಿಗೂ ಬ್ಯಾಂಕಿಂಗ್‌ ಸೌಲಭ್ಯ ತಲುಪಲಿದೆ’ ಎಂದು ಲೋಕಸಭೆ ಸದಸ್ಯ ಪಿ.ಸಿ.ಮೋಹನ್‌ ಹೇಳಿದರು.

ಪುರಭವನದಲ್ಲಿ ಆಯೋಜಿಸಿದ್ದ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನ ಮ್ಯೂಸಿಯಂ ರಸ್ತೆಯ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

‘125 ಕೋಟಿ ಜನಸಂಖ್ಯೆಗೆ ಮೂರು ಕೋಟಿ ಶ್ರೀಮಂತರು ಮಾತ್ರ ಬ್ಯಾಂಕ್‌ ಖಾತೆ ಹೊಂದಿದ್ದರು. ಜನಧನ ಯೋಜನೆಯ ಮೂಲಕ ಕೇವಲ ಒಂಬತ್ತು ತಿಂಗಳಲ್ಲಿ 31 ಕೋಟಿ ಜನ, ಖಾತೆಗಳನ್ನು ಹೊಂದುವಂತೆ ಮಾಡಲಾಯಿತು’ ಎಂದು ಹೇಳಿದರು.

‘2014–17ರ ಅವಧಿಯಲ್ಲಿ ವಿಶ್ವದಲ್ಲಿ ಬ್ಯಾಂಕ್‌ ಖಾತೆ ಹೊಂದಿದವರಲ್ಲಿ ಶೇ 55ರಷ್ಟು ಮಂದಿ ಭಾರತದವರೇ ಆಗಿದ್ದಾರೆ’ ಎಂದು ತಿಳಿಸಿದರು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸತ್ವಂತ್‌ ಸಿಂಗ್‌ ಸಹೋಟ, ‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಈಗ ಸಾಕಷ್ಟು ಸ್ಪರ್ಧೆ ಇದೆ. ಖಾತೆ ತೆರೆದರೂ ಬಹಳಷ್ಟು ಜನರು ಸೇವೆಯಿಂದ ಹೊರಗುಳಿದಿದ್ದಾರೆ. ಗ್ರಾಮೀಣ ಭಾಗದವರಿಗೆ ಸೌಲಭ್ಯ ಒದಗಿಸುವ ಕೆಲಸ ಸವಾಲಿನದ್ದು, ಇದರ ಜೊತೆಗೆ ಆರ್‌ಬಿಐ ನಿಯಮಾವಳಿಗಳನ್ನೂ ಅನುಸರಿಸಬೇಕಿದೆ’ ಎಂದರು.  

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಲಾಯಿತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !