ಬೆಂಗಳೂರು: ಅವಧಿ ಪೂರ್ವ (24 ವಾರಗಳು) ಜನಿಸಿದ 480 ಗ್ರಾಂ ತೂಕದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಇಲ್ಲಿನ ರೇನ್ಬೊ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ತಾಯಿಗೆ ತೀವ್ರ ರಕ್ತದೊತ್ತಡ ಮತ್ತು ಮಧುಮೇಹ ಕಾಣಿಸಿಕೊಂಡ ಪರಿಣಾಮ, ಭ್ರೂಣಕ್ಕೆ ರಕ್ತದ ಹರಿವು ಕಡಿಮೆಯಾಗಿತ್ತು. ಇದರಿಂದಾಗಿ ಅವಧಿ ಪೂರ್ವ ಹೆರಿಗೆ ಮಾಡಿಸಲಾಯಿತು. ಅಂಗೈಗಿಂತ ಚಿಕ್ಕ ಮಗುವಿನ ತೂಕ, ಜನಿಸಿದ ಮೊದಲ ವಾರದ ಅಂತ್ಯಕ್ಕೆ 440 ಗ್ರಾಂಗೆ ಇಳಿಯಿತು. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 147 ದಿನಗಳು ಇರಿಸಿ, ಚಿಕಿತ್ಸೆ ಒದಗಿಸದ ಬಳಿಕ ಮಗುವಿನ ತೂಕ 2.3 ಕೆ.ಜಿ.ಗೆ ಏರಿತು ಎಂದು ಆಸ್ಪತ್ರೆ ತಿಳಿಸಿದೆ.

ಮಕ್ಕಳ ವಿಭಾಗದ ಸಲಹಾ ತಜ್ಞ ಡಾ.ಸರವಣನ್ ಆರ್., ‘ಈ ಪ್ರಕರಣದಲ್ಲಿ ವೈದ್ಯಕೀಯ ಆರೈಕೆ ಮಾತ್ರವಲ್ಲದೆ, ಸೋಂಕುಗಳನ್ನು ತಡೆಗಟ್ಟುವುದು, ಬೆಳವಣಿಗೆಗೆ ಪೂರಕ ಆರೈಕೆ ನೀಡುವುದು, ಸೂಕ್ತ ಪೋಷಕಾಂಶಗಳನ್ನು ಪೂರೈಸುವುದು, ವಿಶೇಷ ಎದೆ ಹಾಲು, ನರಗಳ ಆರೋಗ್ಯಕರ ಬೆಳವಣಿಗೆಯನ್ನು ಖಾತ್ರಿಪಡಿಸುವುದು ಮುಖ್ಯವಾಗಿತ್ತು. ಆಸ್ಪತ್ರೆಯ ಕುಟುಂಬ ಕೇಂದ್ರಿತ ನವಜಾತ ಶಿಶುವಿನ ಆರೈಕೆಯು ಮಗುವಿನ ಚೇತರಿಕೆಯಲ್ಲಿ ನಿರ್ಣಾಯಕ ಭಾಗವಾಗಿತ್ತು. ಮಗು ಚೇತರಿಸಿಕೊಂಡು ಮನೆಗೆ ತೆರಳಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.