ಮಂಗಳವಾರ, ಡಿಸೆಂಬರ್ 1, 2020
17 °C

ಪ್ರೆಸಿಡೆನ್ಸಿ ವಿ.ವಿ: ರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಾನುಕುಂಟೆ ಇಟ್ಗಲ್‌ಪುರದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸುಪ್ರತಿಭಾ ಕಾರಂಜಿ
ಕನ್ನಡ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಮುಖ್ಯ ಅತಿಥಿ ಡಾ. ಶೀಲಾ ಮಳೀಮಠ ಮಾತನಾಡಿ, ‘ಕನ್ನಡ ಬೆಳೆಯಬೇಕಾದರೆ ಮೂರು ಚಿಕಿತ್ಸೆಗಳು ಅಗತ್ಯ. ಒಂದು ಆರ್ಥಿಕ ಚಿಕಿತ್ಸೆ, ಎರಡು ಸಾಮಾಜಿಕ ಚಿಕಿತ್ಸೆ, ಮೂರು ಸಂಘಟನಾತ್ಮಕ ಚಿಕಿತ್ಸೆ‘ ಎಂದರು. 

ಗಾಯಕ ಕಡಬಗೆರೆ ಮುನಿರಾಜು ವಿಶೇಷ ಆಹ್ವಾನಿತರಾಗಿದ್ದರು.ಜನಪದ ಗಾಯಕಿ ಎಲ್ಲಮ್ಮ, ಗಂಗಮ್ಮ ಹಾಗೂ ರೈತ ಹೋರಾಟಗಾರ ವಿಜಯಕುಮಾರ್ ಅವರನ್ನುಸನ್ಮಾನಿಸಲಾಯಿತು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೀವ್ ಮ್ಯಾಸಿ, ಡಾ. ಸುರೇಂದ್ರ, ಕುಲಸಚಿವ ಡಾ. ಬೀರಾನ್ ಮೊಯಿದ್ದೀನ್ ಹಾಗೂ ಜಂಟಿ ಕುಲಸಚಿವ ಅಬ್ದುಲ್ ಬಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.