ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲದರ ಏರಿಕೆ ಖಂಡಿಸಿ ಪ್ರತಿಭಟನೆ

Last Updated 19 ಜೂನ್ 2021, 3:08 IST
ಅಕ್ಷರ ಗಾತ್ರ

ಯಲಹಂಕ: ತೈಲ ಬೆಲೆಏರಿಕೆ ಖಂಡಿಸಿ ಯಲಹಂಕ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡ ಕೇಶವ ರಾಜಣ್ಣ ನೇತೃತ್ವದಲ್ಲಿ ಎನ್ಇಎಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಮಂಜುನಾಥ್ ಅದ್ದೆ, ’ಕೇಂದ್ರದ ಬಿಜೆಪಿ ಸರ್ಕಾರ ಇಡೀ ದೇಶದ ಜನರನ್ನು ತನ್ನ ಸುಳ್ಳುಗಳ ಮೂಲಕ ವಂಚಿಸುತ್ತಿದೆ. 2014 ರಲ್ಲಿ ಪೆಟ್ರೋಲ್ ಬೆಲೆ ₹ 84 ಇದ್ದಾಗ ನರೇಂದ್ರ ಮೋದಿ ಮತ್ತು ಅಮಿತ್ ಶಾ, ಕೆಂಪು ಕೋಟೆಯ ಎದುರು ಸೈಕಲ್ ತುಳಿದು ಪ್ರತಿಭಟನೆ ನಡೆಸಿದ್ದರು. ಆದರೆ, ಇಂದು ಇವರದೇ ನೇತೃತ್ವದ ಸರ್ಕಾರದಲ್ಲಿ ತೈಲದರ ₹ 100ಕ್ಕೆ ಏರಿದೆ. ಇದರಿಂದ ದೇಶದ ಜನರು ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಇದರಬಗ್ಗೆ ಒಂದು ಮಾತನ್ನೂ ಆಡದೆ ಮೌನವಹಿಸಿದ್ದಾರೆ‘ ಎಂದು ದೂರಿದರು.

ಕೇಶವರಾಜಣ್ಣ ಮಾತನಾಡಿ, ’ಕೊರೊನಾ ಹೊಡೆತದಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರು ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ತೈಲದರ ಇಳಿಸಿ ದೇಶದ ಆರ್ಥಿಕತೆ
ಯನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕಪಾಠ ಕಲಿಸ ಲಿದ್ದಾರೆ‘ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ವರುಣ್ ಕುಮಾರ್, ದಿಲೀಪ್ ಕುಮಾರ್, ಮಾರುತಿ, ಅಜರ್ ಷರೀಫ್, ರವಿ ಕುಮಾರ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT