ಮಂಗಳವಾರ, ಮೇ 17, 2022
24 °C

ಕೆ.ಆರ್‌.ಪುರ: ಗಂಗಶೆಟ್ಟಿ ಕೆರೆ ಉಳಿಸಲು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಕೆ.ಆರ್.ಪುರದ ಗಂಗಶೆಟ್ಟಿ ಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ ಕೃಷ್ಣರಾಜಪುರ ಕೆರೆ ಸಂರಕ್ಷಣಾ ಸಮಿತಿ, ಅಖಿಲ ಕರ್ನಾಟಕ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಸಿಪಿಎಮ್ ಸಂಘಟನೆಗಳ ವತಿಯಿಂದ ಖಾಕಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್, ’ಕೆ.ಆರ್.ಪುರ ಸರ್ವೆ ನಂ. 58 ರಲ್ಲಿ ಗಂಗಶೆಟ್ಟಿ ಕೆರೆ ಇದ್ದು ಅದು ಬಿಬಿಎಂಪಿ ಕಚೇರಿಯ ಹಿಂಭಾಗ ಹಾಗೂ ತಹಶಿಲ್ದಾರ್ ಕಚೇರಿ ಮುಂಭಾಗ ಇದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ‘ ಎಂದರು.

ಕೆ.ಆರ್.ಪುರ ಸಂತೆ ಮೈದಾನದಿಂದ ಹೊರಟ ಪ್ರತಿಭಟನೆ ಮೆರವಣಿಗೆ ದೇವಸಂದ್ರ ಸುತ್ತಮುತ್ತಲ ಬಡಾವಣೆಗಳು, ಮುಖ್ಯ ರಸ್ತೆಗಳ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿತು.

’ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಿಗದ ಕಾರಣ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಕಚೇರಿಯನ್ನು ನೂರು ಸುತ್ತು ಸುತ್ತಿ ನೂರೊಂದು ತೆಂಗಿನ ಕಾಯಿ ಒಡೆದು ಮನವಿ ಮತ್ರ ನೀಡಲಾಗುವುದು‘ ಎಂದು ಎಲೆ ಶ್ರೀನಿವಾಸ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು