ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍‘ಪಿಎಸ್ಐ’ ಹುದ್ದೆ ಆಮಿಷವೊಡ್ಡಿ ₹ 18 ಲಕ್ಷ ವಂಚನೆ

Last Updated 8 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆ ಕೊಡಿಸುವುದಾಗಿ ಹೇಳಿ ಮಹಿಳಾ ಅಭ್ಯರ್ಥಿಯೊಬ್ಬರ ತಂದೆಯಿಂದ ₹ 18 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಕೊಟ್ಟು ವಂಚನೆಗೀಡಾಗಿರುವ ತುಮಕೂರಿನ ಪುಟ್ಟರಾಜು ದೂರು ನೀಡಿದ್ದಾರೆ. ಆರೋಪಿ ಶ್ರೀನಿವಾಸ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪುಟ್ಟರಾಜು ಅವರ ಮಗಳು, ಪಿಎಸ್‌ಐ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ, ಲಿಖಿತ ಪರೀಕ್ಷೆ ಬರೆಯಲು ಸಿದ್ಧವಾಗಿದ್ದರು. ಈ ವಿಷಯವನ್ನು ಪುಟ್ಟರಾಜು, ಪರಿಚಯಸ್ಥ ಕೃಷ್ಣಪ್ಪ ಅವರಿಗೆ ತಿಳಿಸಿದ್ದರು.’

‘ಬೆಂಗಳೂರಿನಲ್ಲಿರುವ ಪರಿಚಯಸ್ಥ ಶ್ರೀನಿವಾಸ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದಾನೆ. ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿರುವ ಆತ, ಯಾರಾದರೂ ಅಭ್ಯರ್ಥಿಗಳು ಇದ್ದರೆ ತಿಳಿಸುವಂತೆ ಕೋರಿದ್ದಾನೆ. ಆತನನ್ನು ಸಂಪರ್ಕಿಸಿದರೆ, ಮಗಳಿಗೆ ಪಿಎಸ್‌ಐ ಕೆಲಸ ಸಿಗುವುದು ಖಚಿತ’ ಎಂಬುದಾಗಿ ಕೃಷ್ಣಪ್ಪ ಹೇಳಿದ್ದರು. ಜೊತೆಗೆ, ಪುಟ್ಟರಾಜು ಅವರಿಗೆ ಶ್ರೀನಿವಾಸ್‌ನ ಪರಿಚಯ ಮಾಡಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಅ. 2ರಂದು ಪುಟ್ಟರಾಜು ಅವರನ್ನು ಭೇಟಿಯಾಗಿದ್ದ ಶ್ರೀನಿವಾಸ್, ‘₹70 ಲಕ್ಷ ಕೊಟ್ಟರೆ ಪಿಎಸ್‌ಐ ಹುದ್ದೆ ಕೊಡಿಸುತ್ತೇನೆ’ ಎಂದಿದ್ದರು. ಅಷ್ಟು ಹಣ ಆಗುವುದಿಲ್ಲವೆಂದು ಪುಟ್ಟರಾಜು ಹೇಳಿದ್ದರು. ಬಳಿಕ ₹ 55 ಲಕ್ಷಕ್ಕೆ ಮಾತುಕತೆ ಮುಗಿದಿತ್ತು. ಮುಂಗಡವಾಗಿ ₹ 18 ಲಕ್ಷ ನೀಡಿದ್ದ ದೂರುದಾರ, ಕೆಲಸ ಖಾತ್ರಿಯಾದ ನಂತರ ಉಳಿದ ಹಣ ಕೊಡುವುದಾಗಿ ತಿಳಿಸಿದ್ದರು.’

‘ಹಣ ಪಡೆದ ನಂತರ ಶ್ರೀನಿವಾಸ್ ಯಾವುದೇ ಕೆಲಸ ಕೊಡಿಸಿರಲ್ಲ. ಆತ ಹಲವರನ್ನು ವಂಚಿಸಿದ್ದ ಸಂಗತಿ ಸ್ನೇಹಿತರೊಬ್ಬರ ಮೂಲಕ ಪುಟ್ಟರಾಜು ಅವರಿಗೆ ಗೊತ್ತಾಗಿತ್ತು. ಬಳಿಕವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT