ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿಬಿಎಂಪಿಯ 19 ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಶೇ 70.15ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶದ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 7.68ರಷ್ಟು ಕಡಿಮೆಯಾಗಿದೆ.

ಭೈರವೇಶ್ವರ ನಗರ ಪದವಿಪೂರ್ವ ಕಾಲೇಜು ಶೇ 93.29ರಷ್ಟು ಫಲಿತಾಂಶ ಗಳಿಸಿ ಮೊದಲ ಸ್ಥಾನ ಗಳಿಸಿದ್ದರೆ, ಕಾವೇರಿಪುರ, ಪಾದರಾಯನಪುರ ಕಾಲೇಜು ನಂತರದ ಸ್ಥಾನದಲ್ಲಿವೆ. ಥಣಿಸಂದ್ರ ಕಾಲೇಜು ಶೇ 36.17ರಷ್ಟು ಫಲಿತಾಂಶ ಗಳಿಸಿ ಕೊನೆಯ ಸ್ಥಾನದಲ್ಲಿದ್ದು, ಟಾಸ್ಕರ್ ಟೌನ್, ಜೋಗುಪಾಳ್ಯ ಕಾಲೇಜು ನಂತರದ ಸ್ಥಾನದಲ್ಲಿವೆ.

ವಾಣಿಜ್ಯ ವಿಭಾಗದಲ್ಲಿ ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನ ಪಿ. ಪ್ರತೀಕ್ ಅವರು 585, ಕಸ್ತೂರಬಾ ನಗರ ಕಾಲೇಜಿನ ಡಿ. ಲಿಖಿತಾ 584, ಪಾದರಾಯನಪುರ ಕಾಲೇಜಿನ ಹಾದಿಯಾ ತನ್ಜೀಮ್ 580 ಅಂಕ ಗಳಿಸಿದ್ದಾರೆ.

ಶೇ 85ಕ್ಕಿಂತ ಹೆಚ್ಚು ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 160 ವಿದ್ಯಾರ್ಥಿಗಳಿಗೆ ಪಾಲಿಕೆ ವತಿಯಿಂದ ತಲಾ ₹35 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ಕಾಲೇಜುಗಳಲ್ಲಿ 2021–22ನೇ ಸಾಲಿನಲ್ಲಿ ಶೇ 64.42, 2022–23ನೇ ಸಾಲಿನಲ್ಲಿ ಶೇ 63.18 ಮತ್ತು 2023–24ನೇ ಸಾಲಿನಲ್ಲಿ ಶೇ 77.83ರಷ್ಟು ಫಲಿತಾಂಶ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.