‘ಆನ್‌ಲೈನ್ ವ್ಯವಸ್ಥೆಯೇ ಪರಿಹಾರ’
‘ಎಂತಹ ಸೂಚನೆ ನೀಡಿದರೂ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದನ್ನು ಸರಿಪಡಿಸಬೇಕು ಎಂದಾದರೆ ಇಲಾಖೆಯ ಕಾರ್ಯವೈಖರಿಯಲ್ಲೇ ಬದಲಾವಣೆ ತರಬೇಕು. ಎಲ್ಲ ಕೆಲಸವನ್ನೂ ಆನ್‌ಲೈನ್ ಮತ್ತು ಡಿಜಿಟಲ್ ರೂಪದಲ್ಲಿ ನಡೆಸುವುದೇ ಇದಕ್ಕೆ ಪರಿಹಾರ’ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಆನ್‌ಲೈನ್‌ನಲ್ಲಿ ಈ ಕೆಲಸ ಮಾಡುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಕಡತ ಎಲ್ಲಿದೆ ಯಾರ ಬಳಿ ಎಷ್ಟು ದಿನಗಳಿಂದ ಇದೆ ಎಂಬುದರಲ್ಲಿ ಪಾರದರ್ಶಕತೆ ತರಲು ಇದರಿಂದ ಸಾಧ್ಯವಾಗುತ್ತದೆ. ಆಗಲಾದರೂ ಜನರಿಗೆ ಅನುಕೂಲವಾಗುತ್ತದೆ’ ಎಂದರು.