ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ನಟಿ ರಚಿತಾ ರಾಮ್ ಅವರು ಗುರುವಾರ ಭೇಟಿಯಾಗಿ ಚರ್ಚಿಸಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರಾಗೃಹಕ್ಕೆ ತೆರಳಿದ ಅವರು ದರ್ಶನ್ ಅವರೊಂದಿಗೆ ಅರ್ಧ ತಾಸು ಚರ್ಚೆ ನಡೆಸಿ ವಾಪಸ್ ಬಂದರು.
ನಂತರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ರಚಿತಾ ರಾಮ್, ‘ದರ್ಶನ್ ಅವರು ಆರೋಗ್ಯವಾಗಿದ್ದಾರೆ. ಅವರು ಚಿತ್ರರಂಗದ ರಾಜನಿದ್ದಂತೆ. ಅದೇ ಸ್ಥಾನದಲ್ಲಿ ಅವರನ್ನು ನೋಡುತ್ತೇನೆ’ ಎಂದು ಹೇಳಿ ಭಾವುಕರಾದರು.