ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರಾಜೇಶ್ವರಿನಗರ: ರಾಮಚಂದ್ರಸ್ವಾಮಿ ದೇವರ ಬ್ರಹ್ಮಥೋತ್ಸವ

Published 13 ಏಪ್ರಿಲ್ 2024, 14:38 IST
Last Updated 13 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ರಾಮೋಹಳ್ಳಿ ಕೆರೆಯ ದಡದಲ್ಲಿರುವ ರಾಮಚಂದ್ರಸ್ವಾಮಿ ದೇವರ ಬ್ರಹ್ಮಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಜೈರಾಮ್, ಗೋವಿಂದಾ, ಗೋವಿಂದಾ ಜಯಘೋಷಣೆಯೊಂದಿಗೆ ಬ್ರಹ್ಮರಥೋತ್ಸವ ನೆರವೇರಿತು. ಬ್ರಹ್ಮ ರಥೋತ್ಸವ ಮತ್ತು ಜಾನಪದ ಜಾತ್ರೆಯ ಉತ್ಸವವನ್ನು ರತ್ನಮ್ಮ ವೆಂಕಟೇಶಪ್ಪ, ಸುವರ್ಣ ಸೋಮಶೇಖರ್, ಶಾಂತ ಚಂದ್ರಶೇಖರ್ ಕುಟುಂಬದವರು ನಡೆಸಿಕೊಟ್ಟರು. ರಥೋತ್ಸವಕ್ಕೂ ಮುನ್ನ ವಿವಿಧ ಪೂಜಾ ಕೈಂಕರ್ಯಗಳು, ಹೋಮ ಹವನಗಳು ಜರುಗಿದವು.

ನಾಡಿನ ವಿವಿಧ ಜಾನಪದ ಕಲಾ ತಂಡಗಳು ವಿವಿಧ ಪ್ರದರ್ಶನ ನೀಡಿದವು. ಪೂಜಾ ಕುಣಿತ, ಪಟ್ಟದ ಕುಣಿತ ರಥೋತ್ಸವಕ್ಕೆ ಆಕರ್ಷಣೆ ಮೆರುಗು ನೀಡಿದವು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವೇಣುಗೋಪಾಲ್, ಚೇತನ್ ಗೌಡ, ರಾಜ್ಯ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಆರ್.ಪಿ.ಪ್ರಕಾಶ್, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಸಿ.ಎಂ. ಮಾರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ಜಯಣ್ಣ, ಆರ್.ಎನ್ ಪುಷ್ಪ ಕೃಷ್ಣರಾಜು, ವೇಣುಗೋಪಾಲ್, ಯಲ್ಲಪ್ಪ. ಆರ್.ಎಂ.ರಾಕೇಶ್, ಅಂಜಿನಿ, ಸೂಲಿವಾರ ಬಸವರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT