ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ದೇವಗೆರೆಯಲ್ಲಿರುವ ಆದ್ವಿ ವಿಲ್ಲಾ ಸ್ಟೇ ಮತ್ತು ಆಯಾನ್ ರಿಟ್ರೀಟ್ ಹೋಂ ಸ್ಟೇಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿರುವ ಕಗ್ಗಲೀಪುರ ಠಾಣೆ ಪೊಲೀಸರು, ಪಾರ್ಟಿಯಲ್ಲಿದ್ದ 90 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೋಂ ಸ್ಟೇ ಮಾಲೀಕ ಸುಹಾಸ್ ಹಾಗೂ ಪಾರ್ಟಿ ಆಯೋಜಕ ಶಾಹಿದ್ ಎಂಬಾತನನ್ನು ಬಂಧಿಸಿದ್ದಾರೆ.

ಪಾರ್ಟಿಯಲ್ಲಿದ್ದ ಯುವಕ– ಯುವತಿಯರು 19-23 ವರ್ಷದೊಳಗಿನವರಾಗಿದ್ದಾರೆ. ಎಲ್ಲರೂ ಬೆಂಗಳೂರಿನವರಾಗಿದ್ದು ಕಾಲೇಜು ವಿದ್ಯಾರ್ಥಿಗಳೂ ಇದ್ದಾರೆ. ಗಾಂಜಾ ಸೇರಿದಂತೆ ಇತರ ನಿಷೇಧಿತ ಮಾದಕವಸ್ತುಗಳನ್ನು ಪಾರ್ಟಿಯಲ್ಲಿ ಬಳಸಿರುವ ಶಂಕೆ ವ್ಯಕ್ತವಾಗಿದೆ. ಎಲ್ಲರಿಗೂ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪಾರ್ಟಿಗೆ ಯುವಕ– ಯುವತಿಯರನ್ನು ಪಾರ್ಟಿಗೆ ಕರೆ ತರುವುದಕ್ಕಾಗಿ ಜೆನ್ಜಿ ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಳ್ಳಲಾಗಿತ್ತು. ಅಕ್ರಮವಾಗಿ ತೆರೆದಿದ್ದ ಹೋಂಸ್ಟೇಯಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮದ್ಯ, ಗಾಂಜಾ ಹಾಗೂ ಇತರ ಮಾದಕವಸ್ತು ಸೇವನೆ, ಅಶ್ಲೀಲ ನೃತ್ಯ, ಹಾಡು ಹಾಗೂ ಧ್ವನಿವರ್ಧಕ ಬಳಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ಹೋಂ ಸ್ಟೇಯಲ್ಲಿ ಪಾರ್ಟಿ ಆಯೋಜಿಸಿ ಸ್ಥಳಿಯರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರು ಕಗ್ಗಲೀಪುರ ಠಾಣೆಗೆ ಬಂದಿತ್ತು. ಆ ಮೇರೆಗೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಪಾರ್ಟಿಯಲ್ಲಿ ಮೂವರು ಅಪ್ರಾಪ್ತರೂ ಸಹ ಇದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಸುದ್ದಿಗಾರರಿಗೆ ತಿಳಿಸಿದರು.

‘ಸ್ಥಳದಲ್ಲಿ ಗಾಂಜಾ ಸೇರಿದಂತೆ ಮಾದಕವಸ್ತು ಇಂಜೆಕ್ಷನ್ ಸಿರಿಂಜ್ಗಳು ಪತ್ತೆಯಾಗಿವೆ. ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕ, ಆಯೋಜಕ ಸೇರಿದಂತೆ 90 ಮಂದಿ ವಿರುದ್ಧ ಎಫ್ಐಆರ್ ಮಾಡಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ತನಿಖೆಗೆ ಹಾಜರಾಗುವಂತೆ ಉಳಿದವರಿಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.