ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೋರಾಟಕ್ಕೆ ಸೇನಾ ನೆರವು: ಟ್ವೀಟ್ ಅಭಿಯಾನ

Last Updated 26 ಏಪ್ರಿಲ್ 2021, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಇಡೀ ಬೆಂಗಳೂರು ಕೋವಿಡ್‌ನಿಂದ ತತ್ತರಿಸುತ್ತಿದ್ದು, ಈ ಪರಿಸ್ಥಿತಿಯಲ್ಲಿ ವಾಯುಪಡೆ ಹಾಗೂ ಸೇನೆಯ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳನ್ನು ಬಳಸಿಕೊಂಡು, ನಗರದಾದ್ಯಂತ ಟ್ರಯಾಜ್ ಕೇಂದ್ರಗಳನ್ನು ತೆರೆಯಬೇಕು’ ಎಂಬ ಹಕ್ಕೊತ್ತಾಯದ ಅಭಿಯಾನ ಟ್ವಿಟರ್‌ನಲ್ಲಿ ಶುರುವಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ‘ವೈಟ್‌ಫೀಲ್ಡ್‌ ರೈಸಿಂಗ್‌’ ಸಂಘಟನೆ, ‘ಸೇನೆಯ ‘ಟ್ರಯಾಜ್ಸೆಂಟರ್‌’ಗಳನ್ನು (ರೋಗದ ತೀವ್ರತೆಯ ಆಧಾರದಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂದು ನಿರ್ಧರಿಸಿ ಚಿಕಿತ್ಸೆ ನೀಡುವ ಕೇಂದ್ರಗಳು) ಈ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಬಳಸಿಕೊಳ್ಳುವ ಕುರಿತು ರಾಜ್ಯ ಸರ್ಕಾರ ಮನವಿ ಮಾಡಬಹುದಲ್ಲವೇ’ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹಾಗೂ ಪಾಲಿಕೆ ಮುಖ್ಯ ಆಯುಕ್ತರನ್ನು ಟ್ಯಾಗ್ ಮೂಲಕ ಸಲಹೆ ನೀಡಿದೆ.

‘ಬೆಂಗಳೂರಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳು ಹಾಗೂ ಆಮ್ಲಜನಕದ ಕೊರತೆ ಇದ್ದು, ಪರಿಸ್ಥಿತಿ ಕೈಮೀರಿದೆ. ಕೋವಿಡೇತರ ರೋಗಿಗಳಿಗೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.ತುರ್ತು ಆರೋಗ್ಯ ಸೇವೆಗೆ ಸೇನೆಯ ಟ್ರಯಾಜ್‌ ಕೇಂದ್ರಗಳೇ ಸೂಕ್ತ. ಅಲ್ಲಿ ರೋಗಿಯ ಸ್ಥಿತಿಗತಿ ತುರ್ತಾಗಿ ಪತ್ತೆಯಾಗುತ್ತದೆ. ಇಂತಹ ಕೇಂದ್ರಗಳನ್ನು ನಗರದಾದ್ಯಂತ ತೆರೆಯುವುದರಿಂದ ರೋಗಿಗಳ ಪರದಾಟ ಕಡಿಮೆಯಾಗಲಿದೆ. ಇದಕ್ಕೆ ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ವಾಯುಪಡೆ ಹಾಗೂ ಸೇನೆಗೆ ಸರ್ಕಾರ ಮನವಿ ಮಾಡಬೇಕು’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ನ ಸದಸ್ಯರೊಬ್ಬರು ವಿವರಿಸಿದರು.

ಟ್ವಿಟರ್‌ನಲ್ಲಿ ಈ ಅಭಿಯಾನಕ್ಕೆ ದನಿಗೂಡಿಸಿರುವ ಹಲವರು, ‘ಕೋವಿಡ್ ಸಹ ಒಂದು ಯುದ್ಧ. ದೇಶವನ್ನು ಹೊರದಾಳಿಯಿಂದ ರಕ್ಷಿಸುವ ಸೇನೆ, ಈ ಕೊರೊನಾ ಯುದ್ಧದಲ್ಲಿ ಹೋರಾಡಲು ಜನರ ಸಹಾಯಕ್ಕೆ ಧಾವಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT