ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವ್ ಪಾರ್ಟಿ: ಫಾರ್ಮ್‌ಹೌಸ್ ಮಾಲೀಕರಿಗೆ ನೋಟಿಸ್

Published 24 ಮೇ 2024, 16:32 IST
Last Updated 24 ಮೇ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ರೇವ್ ಪಾರ್ಟಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಜಿ.ಆರ್. ಫಾರ್ಮ್‌ ಹೌಸ್‌ ಮಾಲೀಕರಾಗಿರುವ ‘ಕಾನ್‌ಕಾರ್ಡ್’ ರಿಯಲ್ ಎಸ್ಟೇಟ್ ಕಂಪನಿ ಸಂಸ್ಥಾಪಕ ಆರ್. ಗೋಪಾಲ್ ರೆಡ್ಡಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

‌‘ಜನ್ಮದಿನ ಆಚರಣೆ ನೆಪದಲ್ಲಿ ‘ಸನ್‌ಸೆಟ್‌ ಟು ಸನ್‌ರೈಸ್ ವಿಕ್ಟರಿ’ ಹೆಸರಿನಲ್ಲಿ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಗೆ ಜಾಗ ನೀಡಿದ್ದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಗೋಪಾಲ್ ರೆಡ್ಡಿ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಮೇ 19ರಂದು ರಾತ್ರಿ ಆಯೋಜಿಸಿದ್ದ ಪಾರ್ಟಿಗೆ ಕೆಲವರು, ‘ಜನ್ಮ ದಿನಾಚರಣೆ ಪಾರ್ಟಿ’ ಎಂಬುದಾಗಿ ಹೇಳಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆದಿದ್ದರೆಂಬುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿವೆ.

‘ಪಾರ್ಟಿಯಲ್ಲಿ ತೆಲುಗಿನ ಕೆಲ ನಟ–ನಟಿಯರು ಪಾಲ್ಗೊಂಡಿದ್ದರು. ಈ ಪೈಕಿ ನಟಿ ಹೇಮಾ ಅವರು ಡ್ರಗ್ಸ್ ತೆಗೆದುಕೊಂಡಿದ್ದು ಈಗಾಗಲೇ ಗೊತ್ತಾಗಿದೆ. ಉಳಿದ ಐವರು ನಟ–ನಟಿಯರು ನಾಪತ್ತೆಯಾಗಿದ್ದು, ಅವರ ಪತ್ತೆಗೂ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ದೂರು ದಾಖಲಿಸಿದ ಗೋಪಾಲ್ ರೆಡ್ಡಿ: ‘ನನ್ನ ಫಾರ್ಮ್‌ಹೌಸ್‌ನಲ್ಲಿ ಕೆಲವರು ಅನಧಿಕೃತವಾಗಿ ಪಾರ್ಟಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂಬುದು ಆರೋಪಿಸಿ ಗೋಪಾಲ್ ರೆಡ್ಡಿ ಅವರು ಹೈದರಾಬಾದ್‌ ಪೊಲೀಸರಿಗೆ ದೂರು ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT