ಬೆಂಗಳೂರು: ನಗರ ಜಿಲ್ಲೆಯ ಉತ್ತರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಹಣ ಕಳವು ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಎರಡು ದಿನಗಳಿಂದ ಮಹಿಳಾ ಸಿಬ್ಬಂದಿಯ ಬ್ಯಾಗ್ನಿಂದ ಈ ಇಬ್ಬರು ₹1,230 ಕಳ್ಳತನ ಮಾಡಿದ್ದಾರೆ ಎಂದು ಕಚೇರಿ ಗುಮಾಸ್ತ ಅಶ್ವತ್ಥ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಟೇಬಲ್ ಬಳಿ ಬ್ಯಾಗ್ ಇಟ್ಟು ಊಟಕ್ಕೆ ಸಿಬ್ಬಂದಿ ತೆರಳಿದ್ದಾಗ ಯಾರೂ ಇಲ್ಲದ್ದನ್ನು ಗಮನಿಸಿ ಬ್ಯಾಗ್ನಿಂದ ಹಣ ಕಳವು ಮಾಡುತ್ತಿದ್ದರು. ಈ ದೃಶ್ಯ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೆಲಸದ ನಿಮಿತ್ತ ಕಚೇರಿಗೆ ಬರುವವರ ಮೇಲೆ ಸಹಜವಾಗಿ ಅನುಮಾನಗೊಂಡು ಸಿಸಿಟಿವಿ ಪರಿಶೀಲನೆ ನಡೆಸಲಾಯಿತು. ಕಚೇರಿ ಆವರಣದಲ್ಲಿ ಓಡಾಡುತ್ತಿದ್ದ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಅಶ್ವತ್ಥ್ ತಿಳಿಸಿದ್ದಾರೆ.

ಹಲಸೂರು ಗೇಟ್ ಪೊಲೀಸರು ಈ ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.