ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮೇಲ್ಸೇತುವೆ ನಿರ್ಮಾಣ ಕಾಮಗಾರಿ: ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ

Published 12 ಜನವರಿ 2024, 15:14 IST
Last Updated 12 ಜನವರಿ 2024, 15:14 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌ಟಿ ನಗರ ಹಾಗೂ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಳ್ಳಾರಿ ರಸ್ತೆಯಲ್ಲಿ ಏಕಮುಖ ಮೇಲ್ಸೇತುವೆ ನಿರ್ಮಾಣ ಹಾಗೂ ಹಳೆ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.‌

ಬೆಂಗಳೂರು–ಬಳ್ಳಾರಿ ಸೇವಾ ರಸ್ತೆಯ ಕೆ2 ಬಸ್‌ ನಿಲ್ದಾಣದಿಂದ ಹೆಬ್ಬಾಳ ಪಿ.ಎಸ್‌. ಜಂಕ್ಷನ್‌ ವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನಾಗಶೆಟ್ಟಿಹಳ್ಳಿ, ಭೂಪಸಂದ್ರದಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಭೂಪಸಂದ್ರ–ನಾಗಶೆಟ್ಟಿಹಳ್ಳಿ– ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ, ಸಂಜಯನಗರ ಕ್ರಾಸ್‌ನಲ್ಲಿ ಎಡಕ್ಕೆ ತಿರುವು ಪಡೆದು ಸಂಜಯನಗರ ಮ್ಯಾಜಿಕ್‌ ಬಾಕ್ಸ್‌ನಲ್ಲಿ ಬಲಕ್ಕೆ ತಿರುವು ಪಡೆದು ಬಳ್ಳಾರಿ ರಸ್ತೆಗೆ ವಾಹನಗಳು ಸಂಚರಿಸಬಹುದು.

ನಾಗಶೆಟ್ಟಿಹಳ್ಳಿ–ಭೂಪಸಂದ್ರ ಬಸ್‌ ನಿಲ್ದಾಣ–ಕೆ2 ಬಸ್‌ ನಿಲ್ದಾಣ–ವಿ.ನಾಗೇನಹಳ್ಳಿ ಮುಖ್ಯರಸ್ತೆ (ಗುಡ್ಡದಹಳ್ಳಿ ಮುಖ್ಯರಸ್ತೆ)–ಗುಡ್ಡದಹಳ್ಳಿ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಸುಮಂಗಲಿ ಸೇವಾಶ್ರಮ ರಸ್ತೆಯ ಮೂಲಕ ಬೆಂಗಳೂರು–ಬಳ್ಳಾರಿ ರಸ್ತೆಯ ಮೂಲಕ ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿ ಯಲಹಂಕದ ಕಡೆಯಿಂದ ವಿ. ನಾಗೇನಹಳ್ಳಿ, ಚೋಳನಾಯನಹಳ್ಳಿ ಕನಕನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಜ.13ರ ಬೆಳಿಗ್ಗೆ 6ರಿಂದ ಮುಂದಿನ ಆದೇಶದ ವರೆಗೆ ಈ ಮಾರ್ಗದಲ್ಲಿ ಬದಲಾವಣೆ ಜಾರಿಯಲ್ಲಿ ಇರುಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT