‘ಆಗಸ್ಟ್ 1ರಂದು ಮನೆಯಲ್ಲೇ ಇದ್ದ ಅಜಿತ್, ಊಟ ಮುಗಿಸಿ ಸಂಜೆ ಮನೆಯಿಂದ ಹೊರಬಂದು, ರಿಸಲ್ದಾರ್ ಸ್ಟ್ರೀಟ್‌ನಲ್ಲಿ ನಡೆದು ತೆರಳುತ್ತಿದ್ದ. ಆಗ ಅಡ್ಡ ಬಂದ ಆರೋಪಿಗಳು, ಹಳೇ ದ್ವೇಷದಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಅಕ್ಕಪಕ್ಕದ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಲಭಿಸಿತ್ತು. ತಮಿಳುನಾಡಿಗೆ ತೆರಳಿದ್ದ ಪೊಲೀಸ್ ತಂಡ ಅಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ’ ಎಂದು ಪೊಲೀಸರು ಹೇಳಿದರು.