ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಚಿಂತೆ ನನಗೆ ಬಿಡಿ, ಮನೆಯಲ್ಲಿರಿ: ಮುನಿರತ್ನ

ರಾಜರಾಜೇಶ್ವರಿನಗರ ಕ್ಷೇತ್ರದ ಜನರಿಗೆ ಅಭಯ
Last Updated 26 ಏಪ್ರಿಲ್ 2020, 22:26 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ‘ನೀರಿನ ಸಮಸ್ಯೆ ಇದೆ, ಚರಂಡಿ ಕಟ್ಟಿಕೊಂಡಿದೆ, ಬೋರ್‌ವೆಲ್ ಮೋಟರ್ ಕೆಟ್ಟಿದೆ... ‘ಮುಂತಾದ ಅಳಲುಗಳನ್ನು ಜನ ತೋಡಿಕೊಂಡರು. ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಮುನಿರತ್ನ ಅವರು, ಕರೆಮಾಡಿದವರ ಮೊಬೈಲ್‌ ಸಂಖ್ಯೆ ಪಡೆದುಕೊಂಡರು. ‘ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿದ್ದೀರಲ್ಲ. ಇನ್ನು ನೀವು ನಿಶ್ಚಿಂತೆಯಿಂದ ಇರಿ. ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇನೆ. ಮನೆ ಬಾಗಿಲಿಗೆ ಬರುವ ಊಟದ ಪ್ಯಾಕೇಟ್ ಮತ್ತು ದಿನಸಿ ಕಿಟ್ ಪಡೆದು ಸುರಕ್ಷಿತವಾಗಿ ಮನೆಯಲ್ಲೇ ಇರಿ’ ಎಂದು ಸಲಹೆ ನೀಡಿದರು.

ಕೊರೊನಾ ಲಾಕ್‌ಡೌನ್ ನಂತರ ಒಂದು ತಿಂಗಳಿನಿಂದ ಮನೆಯಲ್ಲೇ ಕುಳಿತಿದ್ದೇವೆ. ಇದ್ದ ಪುಡಿಗಾಸು ಖಾಲಿಯಾಗಿದೆ. ಏನಾದರೂ ಸಹಾಯ ಮಾಡಲು ಸಾಧ್ಯವೇ?

ಸಿದ್ಧಗಂಗಮ್ಮ,ವಿಜಯಾ ಚಂದ್ರಶೇಖರ್ ಲೇಔಟ್‌. ಲಕ್ಷ್ಮೀ,ನಂದಿನಿ ಲೇಔಟ್. ಮುನಿಯಪ್ಪ,ಯಶವಂತಪುರ. ಶರಣಪ್ಪ,ಈರನಪಾಳ್ಯ. ಸುಜಾತಾ,ಮಾಳಗಾಲ. ಭಾಸ್ಕರ,ನಾಗರಬಾವಿ. ಲಕ್ಷ್ಮೀ,ಮಾಳಗಾಲ. ಚಂದ್ರಪ್ಪ,ಯಶವಂತಪುರ. ಜಯಂತ್,ಜೆ.ಪಿ. ಪಾರ್ಕ್. ರಾಜೇಶ್ವರಿ,ಆರ್‌.ಆರ್‌.ನಗರ. ರಮೇಶ್,ಪೀಣ್ಯ ಮೊದಲನೇ ಹಂತ. ಇಂದಿರಾ,ಯಶವಂತಪುರ. ಮಂಗಳಾ,ಆರ್‌.ಆರ್.ನಗರ.

ಮುನಿರತ್ನ: 20 ಸಾವಿರ ದಿನಸಿ ಕಿಟ್‌ಗಳನ್ನು ಈಗಾಗಲೇ ವಿತರಿಸಿದ್ದೇನೆ. ಮತ್ತೆ 20 ಸಾವಿರ ಕಿಟ್‌ಗಳು ವಿತರಣೆಗೆ ಮತ್ತೆ ಸಿದ್ಧವಾಗಿವೆ. ಒಂದೊಂದೇ ವಾರ್ಡ್‌ನಲ್ಲಿ ವಿತರಿಸುತ್ತಿದ್ದೇವೆ. ಬುಧವಾರ ಅಥವಾ ಗುರುವಾರ ನಿಮ್ಮ ವಾರ್ಡ್‌ಗೂ ಬರುತ್ತೇವೆ.

* ಜಾಲಹಳ್ಳಿಯ 16ನೇ ಅಡ್ಡರಸ್ತೆಯಲ್ಲಿ ಕೊಳವೆಬಾವಿ ಪದೇ ಪದೇ ಕೆಟ್ಟು ಹೋಗುತ್ತಿದೆ. ನೀರಿಗೆ ತೊಂದರೆಯಾಗಿದೆ.
-ಜೋತ್ಸ್ನಾ,ಜಾಲಹಳ್ಳಿ ವಿಲೇಜ್

*ಮುನಿರತ್ನ: ಕೂಡಲೇ ನಮ್ಮವರನ್ನು ಸ್ಥಳಕ್ಕೆ ಕಳುಹಿಸುತ್ತೇನೆ. ಏನಾಗಿದೆ ಎಂಬುದನ್ನು ಪರಿಶೀಲಿಸಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ.

* ರಾಜರಾಜೇಶ್ವರಿನಗರದ ಪೊಲೀಸ್ ಠಾಣೆ ಹಿಂಭಾಗದ ಮೂರನೇ ರಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಉಮೇಶ್‌,ಕಿಶೋರ್ ಅರಸ್, ರಾಜರಾಜೇಶ್ವರಿನಗರ

ಮುನಿರತ್ನ: ಸ್ಥಳಕ್ಕೆ ಎಂಜಿನಿಯರ್‌ಗಳನ್ನು ಕಳುಹಿಸಿ ಸಮಸ್ಯೆ ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಬಗೆಹರಿಯದಿದ್ದರೆ ನಾನೇ ಬಂದು ನೋಡುತ್ತೇನೆ.

*ಮಳೆ ಬಂದಾಗ ಚರಂಡಿ ಕಟ್ಟಿಕೊಳ್ಳುತ್ತದೆ. ನೀರು ವಾಪಸ್ ಮನೆ ಬಾಗಿಲಿಗೇ ಬರುತ್ತಿದೆ.
ಕುಮಾರ್,ಜ್ಞಾನಭಾರತಿ

ಮುನಿರತ್ನ: ಅಧಿಕಾರಿಗಳ ಜತೆಗೂಡಿ ನಾನೇ ಸ್ಥಳಕ್ಕೆ ಬಂದು ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ. ನಿಮ್ಮ ದೂರವಾಣಿ ಸಂಖ್ಯೆ ಬರೆದುಕೊಂಡಿದ್ದೇನೆ. ಮನೆ ಹತ್ತಿರ ಬಂದು ಕರೆ ಮಾಡುತ್ತೇನೆ.

* 800 ಕಾರ್ಮಿಕರಿಗೆ ನಾನೇ ಊಟದ ವ್ಯವಸ್ಥೆ ಮಾಡುತ್ತಿದ್ದೇನೆ. ಇನ್ನೂ 200 ಜನರಿಗೆ ಅವಶ್ಯಕತೆ ಇದೆ ಊಟ ಕಳುಹಿಸಲು ಸಾಧ್ಯವೇ?
ಶಿವರಾಜ್,ಡಿ ಗ್ರೂಪ್ ಬಡಾವಣೆ

ಮುನಿರತ್ನ: ಹಣ ಉಳ್ಳವರು ಸಾಕಷ್ಟು ಮಂದಿ ಇದ್ದಾರೆ. ಎಲ್ಲರೂ ದಾನ–ಧರ್ಮ ಮಾಡುವುದಿಲ್ಲ. 800 ಜನರಿಗೆ ಊಟದ ವ್ಯವಸ್ಥೆ ಮಾಡಿರುವುದು ನಿಮ್ಮ ದೊಡ್ಡತನ. ಉಳಿದ 200 ಮಂದಿಯನ್ನು ಕಳುಹಿಸಿಕೊಡಿ. ಅವರೆಲ್ಲರಿಗೂ ನಿತ್ಯ ಊಟದ ವ್ಯವಸ್ಥೆಯನ್ನು ನಾನೇ ಮಾಡುತ್ತೇನೆ.

* ನೀವು ಕಳುಹಿಸುತ್ತಿರುವ ಊಟ ಸೇವಿಸಿ ನೆಮ್ಮದಿಯಿಂದ ಇದ್ದೇವೆ. ಕ್ಷೇತ್ರದ ಜನರಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಶಕ್ತಿ ಬರಲಿ. ಗಟ್ಟಿ ಗುಂಡಿಗೆ ಇರುವ ನೀವು ಮತ್ತೊಮ್ಮೆ ಗೆದ್ದು ಬರಬೇಕು.

*ಲಿಂಗರಾಜು, ನಂಜುಂಡಪ್ಪ,ರಾಜರಾಜೇಶ್ವರಿನಗರ. ಪದ್ಮಮ್ಮ,ಪೀಣ್ಯ.ಸಿದ್ಧರಾಜು,ಬಸವಬಳಗ.ಗೋಪಾಲಗೌಡ,ಜಾಲಹಳ್ಳಿ.ಮುನಿರಾಜು,ಡಿ ಗ್ರೂಪ್ ಬಡಾವಣೆ.

ಮುನಿರತ್ನ: ನಿಮ್ಮ ಆಶೀರ್ವಾದ ಹೀಗೇ ಇರಲಿ. ಯಾರೊಬ್ಬರೂ ಖಾಲಿ ಹೊಟ್ಟೆಯಲ್ಲಿ ಇರಬಾರದು. ನೀವೆಲ್ಲರು ಸುಖ–ಸಂತೋಷದಿಂದ ಇದ್ದರೆ ನನಗೂ ಸಂತೋಷ.

* ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ, ನಿಮ್ಮಿಂದ ಸಹಾಯ ಬೇಕು.
-ಗೋವಿಂದರಾಜು,ಪೀಣ್ಯ ನಾಲ್ಕನೇ ಹಂತ

ಮುನಿರತ್ನ: ನಿಮಗೆ ಕಿಮೋ ಥೆರಪಿ ಮಾಡಿಸಿಕೊಡುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಆ ಕೆಲಸ ಮಾಡುವುದು ನನ್ನ ಜವಾಬ್ದಾರಿ, ಚಿಂತೆ ಬೇಡ.

*ಪಡಿತರ ಚೀಟಿ ಇಲ್ಲ, ಮಾಡಿಸಿಕೊಡಲು ಸಾಧ್ಯವೇ?
-ಎಂಜಾರಪ್ಪ,ಲಗ್ಗೆರೆ

ಮುನಿರತ್ನ: ಕೊರೊನಾ ಸಮಸ್ಯೆ ಮುಗಿದ ಬಳಿಕ ನನ್ನನ್ನು ಭೇಟಿಯಾಗಿ, ನಾನೇ ಖುದ್ದು ನಿಂತು ಮಾಡಿಸಿಕೊಡುತ್ತೇನೆ.

*ಎಂ.ಕಾಂ ಪದವಿ ಪಡೆದಿದ್ದೇನೆ, ಏನಾದರೂ ಉದ್ಯೋಗ ಕೊಡಿಸಿ ದಯವಿಟ್ಟು.
-ಚಂದ್ರಶೇಖರ್,ಆರ್.ಆರ್.ನಗರ

ಮುನಿರತ್ನ: ಲಾಕ್‌ಡೌನ್ ಮುಗಿದ ನಂತರ ನನ್ನನ್ನು ಭೇಟಿಯಾಗಿ. ವ್ಯವಸ್ಥೆ ಮಾಡೋಣ.

*ಜಾಲಹಳ್ಳಿ ಬಾಹುಬಲಿ ನಗರದಲ್ಲಿ ಬೋರ್‌ವೆಲ್ ನೀರು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ.
-ನಿರ್ಮಲಾ,ಜಾಲಹಳ್ಳಿ

ಮುನಿರತ್ನ: ಆ ವಿಷಯ ನನಗೆ ಬಿಡಿ. ನಾಳೆಯೇ ಸಮಸ್ಯೆ ಬಗೆಹರಿಯಲಿದೆ.

ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳೊಂದಿಗೆ ಮುನಿರತ್ನ

* ನಮ್ಮ ಮನೆ ಎದುರಿನ ಮೈದಾನದಲ್ಲಿ ಯುವಕರ ಗುಂಪು ಗಾಂಜಾ ಸೇವಿಸಿ ಓಡಾಡುವುದು ಜಾಸ್ತಿಯಾಗಿದೆ.
-ಹನುಮಯ್ಯ,ಕೆಂಗುಂಟೆ

ಮುನಿರತ್ನ: ಈಗಲೇ ಪೊಲೀಸರಿಗೆ ಮಾಹಿತಿ ನೀಡುತ್ತೇನೆ. ಅವರು ಕ್ರಮ ಕೈಗೊಳ್ಳಲಿದ್ದಾರೆ.

ಮುನಿರತ್ನ: ಈ ರೀತಿಯ ಆಲೋಚನೆ ನನಗೂ ಹೊಳೆದಿದೆ. ಅದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ.

ದಿನಸಿ ಕೊಡುವುದಾಗಿ ನನ್ನ ಹೆಸರು

* ಅನ್ನದಾನ ಮಾಡುತ್ತಿರುವುದು ಒಳ್ಳೆಯ ಕೆಲಸ. ಅದರ ಜೊತೆಗೆ ಕ್ಷೇತ್ರದ ಎಲ್ಲ ಜನರಿಗೆ ಕೋವಿಡ್–19 ತಪಾಸಣೆ ಮಾಡಿಸಿ.

ಶಶಿಕುಮಾರ್,ಯಶವಂತಪುರ

*ಬರೆದುಕೊಂಡು ಹೋದರು. ಇನ್ನೂ ಕೊಟ್ಟಿಲ್ಲ.
ರಾಜೇಶ್ವರಿ,ಎಚ್‌ಎಂಟಿ ಲೇಔಟ್

ಮುನಿರತ್ನ: ನಿಮ್ಮ ನಂಬರ್ ಬರೆದುಕೊಂಡಿದ್ದೇನೆ. ಸಂಜೆಯೊಳಗೆ ನಿಮ್ಮ ಮನೆಗೆ ದಿನಸಿ ಕಿಟ್ ತಲುಪುತ್ತದೆ.

*ಮೋರಿ ರಿಪೇರಿ ಆಗಿಲ್ಲ, ಬಿಡಿಎ ಪಾರ್ಕ್ ಅಭಿವೃದ್ಧಿ ಕಾಮಗಾರಿ ಬಾಕಿ ಉಳಿದಿದೆ.
-ವಿಕಾಸ್,ಜ್ಞಾನಭಾರತಿ

ಮುನಿರತ್ನ: ಕೊರೊನಾ ಮುಗಿದ ಕೂಡಲೇ ಈ ಎರಡೂ ಕೆಲಸಗಳನ್ನು ಮಾಡಿಸುತ್ತೇನೆ.

* ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದೇನೆ. ದಯವಿಟ್ಟು ಮಾಡಿಸಿಕೊಡಿ. ಲಾಕ್‌ಡೌನ್‌ ಅವಧಿಯಲ್ಲಿ ಹಣದ ಅಗತ್ಯ ಬಹಳಷ್ಟಿದೆ
-ಸರಸ್ವತಿ,ಕೆಂಗುಂಟೆ

ಮುನಿರತ್ನ: ಸದ್ಯ ಸಾಲಸೌಲಭ್ಯ ನೀಡುವುದನ್ನು ಸರ್ಕಾರ ನಿಲ್ಲಿಸಿದೆ. ಕೊರೊನಾ ಸಮಸ್ಯೆ ಮುಗಿದ ಕೂಡಲೇ ಸಾಲ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ.

ನಿವೇಶನದ ಹಕ್ಕುಪತ್ರ ಕೊಡಿಸಿದ್ದೀರಿ, ಈಗ ಊಟವನ್ನೂ ಕಳಿಸುತ್ತಿದ್ದೀರಿ. ನಿಮ್ಮಂತ ನಾಯಕರು ನಮಗೆ ಸಿಕ್ಕಿರುವುದೇ ಪುಣ್ಯ.
ಶ್ರೀನಿವಾಸ್,ಜ್ಞಾನಭಾರತಿ

ಮುನಿರತ್ನ: ನಿವೇಶನ ಹಕ್ಕುಪತ್ರ ಪಡೆದವರನ್ನು ಭೇಟಿಯಾಗಲು ಒಮ್ಮೆ ಬರುತ್ತೇನೆ. ನಾನೇ ಮನೆಯನ್ನೂ ಕಟ್ಟಿಸಿಕೊಡುತ್ತೇನೆ. ಸದ್ಯಕ್ಕೆ ಹೊರಗಡೆ ಹೋಗದೆಸುರಕ್ಷಿತವಾಗಿ ಇರಿ.

ಮಾಜಿ ಶಾಸಕ ಮುನಿರತ್ನ ಬೆಂಗಳೂರು ವಿಶ್ವವಿದ್ಯಾಲಯದ ಸಮೀಪ ಇರುವ ಮೈಸೂರು ರಸ್ತೆ ಮತ್ತು ರಾಜರಾಜೇಶ್ವರಿ ನಗರ ಕಮಾನು ಬಳಿ ಸಂಚಾರ ದಟ್ಟಣೆ ತಡೆಯಲು ಹೊಸ ರಸ್ತೆ ನಿರ್ಮಾಣ ಮಾಡಲು ತಯಾರಿಸಿರುವ ನೀಲನಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT