ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗಾಂಧಿ ಹತ್ಯೆ ಬಳಿಕ ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್ ಅಪಪ್ರಚಾರ'

Last Updated 28 ಜೂನ್ 2020, 21:29 IST
ಅಕ್ಷರ ಗಾತ್ರ

ಬೆಂಗಳೂರು: 'ಮಹಾತ್ಮ ಗಾಂಧಿ ಹತ್ಯೆಯ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಅಂದಿನ ಕಾಂಗ್ರೆಸ್ ಸರ್ಕಾರ ವ್ಯಾಪಕವಾಗಿ ಅಪಪ್ರಚಾರ ಹಾಗೂ ಆಪಾದನೆ ಹೊರಿಸಿತು. ಸಂಘದ ಬೆಳವಣಿಗೆ ತಡೆಯಲು ಕಾಂಗ್ರೆಸ್ ನಾಯಕರು ಹಾಗೂ ಎಡಪಂಥೀಯರು ನಿರಂತರವಾಗಿ ಅಪಪ್ರಚಾರ ನಡೆಸಿದರು' ಎಂದು ಆರ್‌ಎಸ್‌ಎಸ್‌ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ತಿಳಿಸಿದರು.

ಸಂವಾದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರತನ್ ಶಾರದಾ ಅವರ 'ಆರೆಸ್ಸೆಸ್ 360°' ಪುಸ್ತಕ (ಕನ್ನಡಕ್ಕೆ ಎಸ್.ಎಸ್.ನರೇಂದ್ರ) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಗಾಂಧೀಜಿ ಹತ್ಯೆಯ ವಿಚಾರದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಮಾಡಲಾದ ಆಪಾದನೆಗಳನ್ನು ಸಾಮಾನ್ಯ ಜನರು ನಂಬಲಿಲ್ಲ. ಒಂದು ವೇಳೆ ನಂಬಿದ್ದರೆ ಸಂಘದ ಶಾಖೆಗಳು ಇಷ್ಟರಮಟ್ಟಿಗೆ ಬೆಳೆಯುತ್ತಿರಲಿಲ್ಲ‘ ಎಂದರು.

'ತುರ್ತುಪರಿಸ್ಥಿತಿ ವೇಳೆ ಶೇ 90ರಷ್ಟು ಆರ್‌ಎಸ್‌ಎಸ್‌ ಸ್ವಯಂಸೇವಕರೇ ಬಂಧನಕ್ಕೆ ಒಳಗಾದರು. ಪ್ರತಿ ಜೈಲಿನಲ್ಲೂ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರಿಂದ ಅಲ್ಲೂ ಶಾಖೆಗಳು ಆರಂಭವಾದವು. ಆದರೆ, ಭೂಗತ ಚಟುವಟಿಕೆಯಲ್ಲಿ ನಿರತರಾಗಿದ್ದವರು ಚಿತ್ರಹಿಂಸೆ ಅನುಭವಿಸಿದರು' ಎಂದರು.

ಶಿಕ್ಷಣ ತಜ್ಞ ಗುರುರಾಜ ಕರಜಗಿ, 'ಸಂಘವು 9ರಿಂದ 10 ವರ್ಷದ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕು. ಇದು ಮೌಲ್ಯಗಳು ಸ್ಥಾಪನೆಯಾಗುವ ಸಮಯ. ಮುಂದೆ ಸಂಘ ಗಟ್ಟಿಯಾಗಬೇಕಾದರೆ ಇಂದೇ ಬೀಜ ನೆಡಬೇಕು. ಇದರೊಟ್ಟಿಗೆ ಗೃಹಸಂಪರ್ಕ ಬೆಳೆಸುವುದು ಸಂಘದ ಬಹುದೊಡ್ಡ ಕೆಲಸವಾಗಲಿ.ಮಕ್ಕಳನ್ನು ಟಿ.ವಿ ಹಾಗೂ ಶಿಕ್ಷಣದ ಗೊಂದಲಗಳಿಂದ ಹೊರತಂದು, ವಾರದಲ್ಲಿ ಒಂದು ಅಥವಾ ಎರಡು ದಿನಗಳು ಶಾಖೆಗಳತ್ತ ಬರುವ ಶಿಸ್ತು ಮೂಡಿಸಬೇಕು' ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT