ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮಯ್ಯ ಸ್ಯಾಟ್’ ನ್ಯಾನೋ ಉಪಗ್ರಹ ನಿರ್ಮಾಣಕ್ಕೆ ಒಡಂಬಡಿಕೆ

Last Updated 20 ಜುಲೈ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್‌ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು. ‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೇಲ್ವಿಚಾರಣೆ ಹಾಗೂ ಭಾರ ತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್ ಸಹಾಯದಿಂದ ವಿದ್ಯಾರ್ಥಿಗಳು ನ್ಯಾನೋ ಉಪಗ್ರಹ ಅಭಿವೃದ್ಧಿ ಪಡಿಸುತ್ತಿದ್ದಾರೆ. ಒಂದು ಉಪಗ್ರಹದ ಅಭಿವೃದ್ಧಿಗೆ ₹ 1 ಕೋಟಿ ವೆಚ್ಚವಾಗಲಿದೆ.‌

ಪ್ರೊ.ಕುಲ್‌ದೀಪ್ ಕೆ. ರೈನಾ ಮಾತನಾಡಿ, ‘ಈ ಉಪಗ್ರಹ ನಿರ್ಮಾಣ ಕಾರ್ಯವು ನಮ್ಮ ಸಂಸ್ಥೆಗೆ ಗೌರವ ಮತ್ತು ಮನ್ನಣೆ ತರುವ ವಿಚಾರ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಅವಕಾಶ’ ಎಂದರು.

‘ರಾಮಯ್ಯ ಸ್ಯಾಟ್’ ಉಪಗ್ರಹವು 300 ಗ್ರಾಂ ಪೇಲೋಡ್‌ ಹೊಂದಿದ್ದು, 1.6 ಕೆ.ಜಿ. ತೂಕ ಇರುತ್ತದೆ. ದೂರದ ಪ್ರದೇಶಗಳಿಗೆ ಸಂಪರ್ಕ ಸಂವಹನ ಜಾಲವನ್ನು ಒದಗಿಸಲು, ನೀರು ಮತ್ತು ಹವಾಮಾನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ. ಈ ಉಪಗ್ರಹದ ನಿಯಂತ್ರಣವನ್ನು ವಿಶ್ವವಿದ್ಯಾಲಯದ ಪೀಣ್ಯ ಆವರಣದಲ್ಲಿ ಸ್ಥಾಪಿಸಲಾಗುವುದು. ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಮುರಳಿಕೃಷ್ಣ ರೆಡ್ಡಿ ತಿಳಿಸಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್‌.ಜಯರಾಂ, ಎಂ.ಆರ್.ಶ್ರೀನಿವಾಸ ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT