ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆ: ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಜಾರಕಿಹೊಳಿ, ಶರತ್ ಬಚ್ಚೆಗೌಡ

Published 9 ಸೆಪ್ಟೆಂಬರ್ 2023, 15:47 IST
Last Updated 9 ಸೆಪ್ಟೆಂಬರ್ 2023, 15:47 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಸೋಂಪುರದ ಪಟ್ಟಣದಿಂದ ರಾಷ್ಟೀಯ ಹೆದ್ದಾರಿ 207ರವರೆಗೂ ನಿರ್ಮಿಸಿರುವ ದಾಬಸ್‌ಪೇಟೆ- ಹೊಸಕೋಟೆ ಹಾಗೂ ಚೆನ್ನೈ ಮಾರ್ಗದ ರಸ್ತೆ ಕಾಮಗಾರಿ ಪ್ರಗತಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಶರತ್ ಬಚ್ಚೆಗೌಡ ಶನಿವಾರ ಪರಿಶೀಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ದಾಬಸ್‌ಪೇಟೆ- ಹೊಸಕೋಟೆ ಹಾಗೂ ಚೆನ್ನೈ ಮಾರ್ಗ ರಸ್ತೆಯ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ. ಇದು ಅಂತರರಾಷ್ಟಿಯ ವಿಮಾನ ನಿಲ್ದಾಣಕ್ಕೆ ಸಮೀಪದ ರಸ್ತೆ. ಇದರಿಂದ, ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ’ ಎಂದರು.

ಬೆಂಗಳೂರಿಗೆ ಹೆಚ್ಚಿನ ವಾಹನಗಳು ಬರುವುದನ್ನು ತಡೆಗಟ್ಟಲು ಹೊರ ವರ್ತುಲ ರಸ್ತೆ ನಿರ್ಮಿಸುವುದು ನಮ್ಮ ಸರ್ಕಾರದ ಕನಸು. ರಸ್ತೆ ಕಾಮಗಾರಿ ಕಾರ್ಯವನ್ನು ಶೀಘ್ರವಾಗಿ ಕೈಗೆತ್ತಿ ಕೊಳ್ಳಲಾಗುವುದು. ಹಾಗೆಯೇ ಹೈದರಾಬಾದ್ ರಸ್ತೆ, ಕೋಲಾರ ರಸ್ತೆ ಹಾಗೂ ರಾಮನಗರ ರಸ್ತೆಯನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ರಾಷ್ಟೀಯ ಹೆದ್ದಾರಿ 207ರ ನಿರ್ಮಾಣದಿಂದ ಸೋಂಪುರ ಪಟ್ಟಣ ಎರಡು ಭಾಗವಾಗಿದೆ. ರಸ್ತೆ ಬಂದ್ ಮಾಡಿರುವುದರಿಂದ ಪ್ರತಿವರ್ಷ ದೇವರ ಉತ್ಸವಗಳು ಮಾಡಬೇಕಾದರೆ ಇಲ್ಲಿನ ಸ್ಥಳೀಯರು ಸುತ್ತಾಡಬೇಕಿದೆ. ಈ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಸಚಿವರಿಗೆ ಸ್ಥಳೀಯರು ಮನವರಿಕೆ ಮಾಡಿದರು.

ಶಾಸಕ ಶರತ್ ಬಚ್ಚೇಗೌಡ, ಯೋಜನೆಯ ವ್ಯವಸ್ಥಾಪಕ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT