ಮಂಗಳವಾರ, ಫೆಬ್ರವರಿ 18, 2020
26 °C

ಸುರಕ್ಷತಾ ಸೌಲಭ್ಯ ಅಳವಡಿಕೆ ಅಗತ್ಯ: ರಾಘವೇಂದ್ರ ಔರಾದ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬ್ಯಾಂಕ್‌, ಆಭರಣ ಮಳಿಗೆ ಮತ್ತು ಬೃಹತ್‌ ಕಾರ್ಪೊರೇಟ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸುರಕ್ಷತಾ ಸೌಲಭ್ಯಗಳನ್ನು ಅಳವಡಿ ಸಿಕೊಳ್ಳುವ ಅಗತ್ಯ ಹೆಚ್ಚಿದೆ’ ಎಂದು ಕರ್ನಾಟಕ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

ಬಸವನಗುಡಿಯ ಆರ್‌.ವಿ ರಸ್ತೆಯಲ್ಲಿ ಆರಂಭಗೊಂಡ ಗುನ್ನೆಬೊ ಇಂಡಿಯಾದ ‘ಎಕ್ಸಪೀರಿಯನ್ಸ್‌ ಸೆಂಟರ್‌’ ಉದ್ಘಾಟಿಸಿ ಅವರು ಮಾತನಾಡಿದರು. ‘ಕಂಪನಿ ತಯಾರಿಸುವ ಅತ್ಯಾಧುನಿಕ ಭದ್ರತಾ ಸೌಲಭ್ಯಗಳನ್ನು ಬ್ಯಾಂಕ್‌, ರಿಟೇಲ್‌ ಮಳಿಗೆ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಅಳವಡಿಸಿಕೊಂಡರೆ ಸುರಕ್ಷತೆ ಹೆಚ್ಚಲಿದೆ. ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ’ ಎಂದರು.

ಬೆಲೆಬಾಳುವ ಸರಕುಗಳಿಗೆ ಸುರಕ್ಷತೆ ಒದಗಿಸುವ ಸೇವೆ, ತಂತ್ರಜ್ಞಾನ ಮತ್ತು ಪರಿಕರಗಳನ್ನು ಜಾಗತಿಕ ಕಂಪನಿ ಗುನ್ನೆಬೊ ಗ್ರೂಪ್‌ ಒದಗಿಸುತ್ತಿದೆ. ಈ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ ವಾಣಿಜ್ಯ ವಹಿವಾಟಿನ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ನೆರವಾಗುವ ಅತ್ಯಾಧುನಿಕ ಪರಿಕರಗಳ ವಿಶಾಲ ಶ್ರೇಣಿ ಇದೆ.

‘ಕಂಪನಿಯು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಲಾಕರ್ ಮತ್ತು ಸ್ಪ್ರಾಂಗ್‌ರೂಂಗಳನ್ನು ತಯಾರಿಸಿ ಕೊಡುತ್ತದೆ’ ಎಂದು ಗುನ್ನೆಬೊ ಸೇಫ್ ಸ್ಟೊರೇಜ್‌ ನ ಉಪಾಧ್ಯಕ್ಷ ರಾಮ್ ಶ್ರೀನಿವಾಸನ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು