ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕಷ್ಟಗಳಿಗೆ ಸ್ಪಂದಿಸುವವರನ್ನು ಆಯ್ಕೆಮಾಡಿ: ಆರ್‌.ಎಸ್‌. ಉದಯ್‌ ಸಿಂಗ್‌

ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆರ್‌.ಎಸ್‌.ಉದಯ್‌ ಸಿಂಗ್‌
Published 18 ಮೇ 2024, 2:48 IST
Last Updated 18 ಮೇ 2024, 2:48 IST
ಅಕ್ಷರ ಗಾತ್ರ

ಯಲಹಂಕ: ‘ಪದವೀಧರ ಮತದಾರರು ಪದವೀಧರರ ಸಂಕಷ್ಟಗಳನ್ನು ಅರಿತಿರುವ ಹಾಗೂ ಪರಿಹರಿಸಲು ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು‘ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್‌.ಎಸ್‌.ಉದಯ್‌ ಸಿಂಗ್‌ ಮನವಿ ಮಾಡಿದರು.

ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರಿನ ವಿಜಯಜ್ಯೋತಿ ಪಬ್ಲಿಕ್‌ ಶಾಲೆಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್‌ ಪದವೀಧರರ ಚುನಾವಣೆಯ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಆದರೆ ಇವರಿಂದ ಪದವೀಧರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಆರು ವರ್ಷಗಳಿಗೊಮ್ಮೆ ಚುನಾವಣೆ ಸಂದರ್ಭದಲ್ಲಿ ಕಾಣಿಸುವ ಈ ಅಭ್ಯರ್ಥಿಗಳು, ಮತ್ತೆ ಜನರ ಕೈಗೆ ಸಿಗುವುದೇ ಇಲ್ಲ‘ ಎಂದು ಟೀಕಿಸಿದರು.

‘ಹಲವು ವರ್ಷಗಳಿಂದ ಪದವೀಧರರ ಸಂಕಷ್ಟಗಳ ಬಗ್ಗೆ ಧ್ವನಿಯೆತ್ತುತ್ತಾ ಬಂದಿದ್ದೇನೆ. ಪದವೀಧರರ ಬದುಕು ಬದಲಿಸಲು ನನ್ನದೇ ಆದ ವಿಭಿನ್ನ ಚಿಂತನೆಗಳನ್ನು ಹೊಂದಿದ್ದು, ಅವುಗಳನ್ನು ಸಾಕಾರಗೊಳಿಸಲು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ‘ ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್‌ ನಟರಾಜ್‌, ಕರ್ನಾಟಕ ರಾಜ್ಯ ಖಾಸಗಿ ಶಾಲಾ–ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಾಮಚಂದ್ರ, ಪ್ರಧಾನ ಕಾರ್ಯದರ್ಶಿ ವಿ.ಸುರೇಶ್‌, ಕಾರ್ಯದರ್ಶಿ ಚಿಕ್ಕಹನುಮಂತೇಗೌಡ, ಬಾಗಲೂರು ಗ್ರಾಮಪಂಚಾಯಿತಿ ಸದಸ್ಯರಾದ ಅನಿಲ್‌ ಕುಮಾರ್‌, ಪ್ರಭುಸ್ವಾಮಿ, ಚಂದ್ರು, ಬೈರೇಗೌಡ, ವಿಜಯಜ್ಯೋತಿ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಎಸ್‌.ಮಧುಕುಮಾರ್‌, ಗೋಪಾಲಪುರದ ಡೈರಿ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT