ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಧಾರಾಕಾರ ಮಳೆ: ಮನೆಗೆ ನುಗ್ಗಿದ ಒಳಚರಂಡಿ ನೀರು

ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಪರಿಣಾಮ
Published 11 ಮೇ 2024, 16:24 IST
Last Updated 11 ಮೇ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿದೆ.

ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಸುಮಾರು ಒಂದೂವರೆ ಗಂಟೆ ಭಾರಿ ಮಳೆಯಾಗಿದೆ. ರಾಜರಾಜೇಶ್ವರಿನಗರ ವಲಯದ ಹೇರೇಹಳ್ಳಿ, ಕೆಂಗೇರಿ, ಪೀಣ್ಯ ಕೈಗಾರಿಕೆ ಪ್ರದೇಶ, ಜ್ಞಾನಭಾರತಿ ಸುತ್ತಲಿನ ಪ್ರದೇಶಗಳಲ್ಲಿ 6 ಸೆಂಟಿಮೀಟರ್‌ನಿಂದ 9 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ.

ಹೊಸಕೆರೆಹಳ್ಳಿ ಸಮೀಪದ ಪುಷ್ಪಗಿರಿ ಪ್ರದೇಶದಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ರಾತ್ರಿಯಿಡೀ ಪರಿತಪಿಸಿದರು. ‘ಈ ಪ್ರದೇಶದಲ್ಲಿ ಒಳಚರಂಡಿ ಮಾರ್ಗದಲ್ಲಿ ಸಮಸ್ಯೆಗಳಿವೆ. ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ಧಾರಾಕಾರವಾಗಿ ಮಳೆ ಸುರಿದಿದ್ದರಿಂದ, ಹಲವು ರಸ್ತೆಗಳಲ್ಲಿ ಮಳೆ ನೀರು ಹೆಚ್ಚಾಗಿ ನಿಂತಿತ್ತು. ಮೈಸೂರು ರಸ್ತೆ, ಪೀಣ್ಯ ಮುಖ್ಯರಸ್ತೆ, ನಾಯಂಡಹಳ್ಳಿಯಲ್ಲಿ ಸಂಚಾರ ನಿಧಾನಗತಿಯಲ್ಲಿತ್ತು. ನಗರದ ವಿವಿಧ ಕಡೆಗಳಲ್ಲಿ ಗಾಳಿ ಮಳೆಯಿಂದಾಗಿ ಸುಮಾರು ಒಂದು ತಾಸು ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತು.

ಶುಕ್ರವಾರ ರಾತ್ರಿ ಸುರಿದ ಮಳೆ (ಸೆಂ.ಮೀ)

ಹೇರೋಹಳ್ಳಿ;9.25

ಕೆಂಗೇರಿ;9.15

ಹೆಗ್ಗನಹಳ್ಳಿ;6.25

ಪೀಣ್ಯ ಕೈಗಾರಿಕೆ ಪ್ರದೇಶ;6.25

ಜ್ಞಾನಭಾರತಿ ವಿವಿ ಆವರಣ;6.2

ಹೆಮ್ಮಿಗೆಪುರ;6.2

ನಾಯಂಡಹಳ್ಳಿ;6.2

ರಾಜರಾಜೇಶ್ವರಿನಗರ;6.15

ಜ್ಞಾನಭಾರತಿ ವಾರ್ಡ್‌;6.15

ಎಚ್‌. ಗೊಲ್ಲಹಳ್ಳಿ;5.8

ನಾಗರಬಾವಿ;5.2

ಮಾರುತಿ ಮಂದಿರ;5.2

ಬಸವನಗುಡಿ;5.15

ಕುಮಾರಸ್ವಾಮಿ ಲೇಔಟ್‌;5.15

ವಿದ್ಯಾಪೀಠ;5.15

ಉತ್ತರಹಳ್ಳಿ;4.55

ಹಂಪಿನಗರ;4.25

ಗಾಳಿ ಆಂಜನೇಯ ದೇವಸ್ಥಾನ;4.25

ಯಲಹಂಕ;3.9

ಬ್ಯಾಟರಾಯನಪುರ;3.8

ಜಕ್ಕೂರು;3.8

ಅಗ್ರಹಾರ ದಾಸರಹಳ್ಳಿ;3.35

ಕೊಟ್ಟಿಗೆಪಾಳ್ಯ;3.35

ನಂದಿನಿ ಲೇಔಟ್;3

ಎಚ್‌ಎಂಟಿ ವಾರ್ಡ್‌;3

ಕೊಡಿಗೇಹಳ್ಳಿ;3

ರಾಧಾಕೃಷ್ಣ ದೇವಸ್ಥಾನ ವಾರ್ಡ್‌;3

ಹೊಸಕೆರೆಹಳ್ಳಿ ಸಮೀಪದ ಪುಷ್ಪಗಿರಿ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದಿರುವುದು
ಹೊಸಕೆರೆಹಳ್ಳಿ ಸಮೀಪದ ಪುಷ್ಪಗಿರಿ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT