ಬೆಂಗಳೂರು: ಕಳೆದುಹೋದ ಚಿನ್ನದ ಉಂಗುರ ಹುಡುಕುವ ನೆಪದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪಿ.ಜಿ ಮಾಲೀಕನನ್ನು ಮೈಕೊ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪಿ.ಜಿ ಮಾಲೀಕ ರವಿತೇಜ ರೆಡ್ಡಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬಿಟಿಎಂ ಲೇಔಟ್ನಲ್ಲಿ ಆರೋಪಿ ರವಿತೇಜ ರೆಡ್ಡಿ ಮಹಿಳಾ ಪಿ.ಜಿ ನಡೆಸುತ್ತಿದ್ದ. ಪಿ.ಜಿಯಲ್ಲಿ ವಾಸವಾಗಿದ್ದ ಯುವತಿಯ ಚಿನ್ನದ ಉಂಗುರ ಜೂನ್ 21ರಂದು ಕಳವಾಗಿತ್ತು. ಮಾಲೀಕ ರವಿತೇಜನಿಗೆ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಆರೋಪಿ ಪಿ.ಜಿಯಲ್ಲಿರುವ ಯುವತಿಯರ ಕೋಣೆ ಹಾಗೂ ಅವರ ಲಗೇಜ್ ತಪಾಸಣೆ ನಡೆಸಿದ್ದ. ಆಗ ಯುವತಿಯನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸಂತ್ರಸ್ತೆಗೆ ಜೀವ ಬೆದರಿಕೆಯೊಡ್ಡಿದ್ದ. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.