ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಒನ್‌’ನಲ್ಲಿ ₹410 ಕೋಟಿ ಹಳೆ ನೋಟು ಎಕ್ಸ್‌ಚೇಂಜ್‌

Last Updated 30 ಜೂನ್ 2018, 8:54 IST
ಅಕ್ಷರ ಗಾತ್ರ

ಬೆಂಗಳೂರು: ಚಲಾವಣೆಯಿಂದ ನಿಷೇಧಿಸಲಾದಹಳೆ ನೋಟು ಬದಲಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ. ಚಾರ್ಜ್ ಹಾಗೂ ಮತ್ತಿತ್ತರ ಶಾಸಕರು ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್ಆರೋಪಿಸಿದರು.

‘ಬೆಂಗಳೂರು ಒನ್’ ಕೇಂದ್ರಗಳಲ್ಲಿ2016ರ ನವೆಂಬರ್‌ನಿಂದ 141 ದಿನಗಳಲ್ಲಿ ₹500, ₹1000 ಮುಖ ಬೆಲೆ ಹಳೆಯ‌ ನೋಟುಗಳನ್ನು ಬದಲಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು. ಈ ಕುರಿತು ರಮೇಶ್‌, ಶನಿವಾರ 235 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ನೂರಾರು‌ ಕೋಟಿ ಹಣ ಬದಲಾವಣೆ ಹಗರಣದ ಬಗ್ಗೆ ಲೋಕಾಯುಕ್ತ, ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ದೂರು‌ ನೀಡಿರುವುದಾಗಿ ಅವರು ತಿಳಿಸಿದರು.

‘ಬೆಂಗಳೂರು ಒನ್‌’ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ. ಹಾಗಾಗಿ, ಕಾಂಗ್ರೆಸ್‌ನ ಹಲವು ಮುಖಂಡರು ವ್ಯವಸ್ಥೆಯನ್ನು ದುಬರ್ಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT