ಶನಿವಾರ, ಮಾರ್ಚ್ 28, 2020
19 °C

‘ಸ್ಲಂ’ ಎನ್‌ಕೌಂಟರ್‌ನಿಂದ ನಡುಕ; ಶರಣಾದ ರೌಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ, ಸುಲಿಗೆ, ಕೊಲೆಯತ್ನ, ಜೀವ ಬೆದರಿಕೆ ಸೇರಿ 43 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ‘ಸ್ಲಂ’ ಭರತನನ್ನು ಉತ್ತರ ವಿಭಾಗದ ಪೊಲೀಸರು ಎನ್‌ಕೌಂಟರ್‌ ಮಾಡಿ ದಾಗಿನಿಂದ ನಗರದ ರೌಡಿಗಳಲ್ಲಿ ನಡುಕ ಶುರುವಾಗಿದೆ. ಪೊಲೀಸರು ತಮ್ಮ ಮೇಲೆಯೂ ಗುಂಡು ಹಾರಿಸಬಹುದೆಂಬ ಭಯದಲ್ಲಿ ಐವರು ರೌಡಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಸ್ಲಂ ಭರತನ ಸಹಚರನಾದ ’ಸ್ಲಂ‘ ಮಧು (23), ಎದುರಾಳಿ ಗ್ಯಾಂಗ್‌ನ ವಿನಯ್‌ಕುಮಾರ್ ಅಲಿಯಾಸ್ ಮಿಂಡಾ (25), ಮುನಿರಾಜ್ ಅಲಿ ಯಾಸ್ ಕರಿಯ (28), ಸತೀಶ್ ಅಲಿ ಯಾಸ್ ತುರೆ (25) ಹಾಗೂ ಅಜಯ್ ಅಲಿಯಾಸ್ ಗಜ್ಜಿ (19) ಶರಣಾದ ರೌಡಿಗಳು.   

‘ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಭರತನನ್ನು ಇತ್ತೀಚೆಗೆ ಎನ್‌ಕೌಂಟರ್ ಮಾಡಲಾಗಿದೆ. ಇದಾದ ನಂತರ ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿದೆ. ಅದರ ನಡುವೆಯೇ ರೌಡಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ’ ಎಂದು ಉತ್ತರ ವಿಭಾ ಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಅಪರಾಧ ಕೃತ್ಯ ಎಸಗುವುದನ್ನೇ ವೃತ್ತಿ ಮಾಡಿ ಕೊಂಡಿದ್ದ ಸ್ಲಂ ಭರತ, ತನ್ನದೇ ಗ್ಯಾಂಗ್‌ ಕಟ್ಟಿ ಕೊಂಡಿದ್ದ. ಅದರ ಲ್ಲಿದ್ದ ಸ್ಲಂ ಮಧು, ಭರತನ ಜೊತೆ ಸೇರಿ ಹಲವು ಕೃತ್ಯ ಎಸಗಿದ್ದ. 5 ಪ್ರಕರಣಗಳಲ್ಲಿ ಆತನ ವಿರುದ್ಧ ಬಂಧನ ವಾರಂಟ್ ಜಾರಿ ಆಗಿತ್ತು. ಹಲವು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆತ, ಇದೇ 3ರಂದು 50ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ’ ಎಂದು ಹೇಳಿದರು.

‘ಭರತ ಹಾಗೂ ಆತನ ಸಹಚರರನ್ನು ಮುಗಿಸಲೆಂದೇ ವಿನಯ್‌ಕುಮಾರ್ ಅಲಿಯಾಸ್ ಮಿಂಡಾ ಮತ್ತೊಂದು ಗ್ಯಾಂಗ್‌ ಕಟ್ಟಿಕೊಂಡಿದ್ದ. ಮುನಿರಾಜ್, ಸತೀಶ್ ಹಾಗೂ ಅಜಯ್ ಅದೇ ಗ್ಯಾಂಗ್‌ ಸದಸ್ಯರು. ಅವರೆಲ್ಲರೂ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿ ದ್ದಾರೆ. ಅವರ ವಿರುದ್ಧ ಹಲವು ಪ್ರಕರಣ ಗಳಿದ್ದು, ಅವುಗಳ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು