ಬುಧವಾರ, ಏಪ್ರಿಲ್ 21, 2021
24 °C

ಸ್ಲಂ ಭರತನ ನಾಲ್ವರು ಸಹಚರರ ಬಂಧನ    

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಖ್ಯಾತ ರೌಡಿ ಸ್ಲಂ ಭರತನ ನಾಲ್ವರು ಸಹಚರರನ್ನು ಬಸವೇಶ್ವರನಗರದ ಬಳಿ ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತರನ್ನು ಕುರುಬರಹಳ್ಳಿಯ ಪ್ರೇಮ್‌ ಕುಮಾರ್‌ (29), ಸುನಿಲ್‌ (30), ಅಗ್ರಹಾರ ದಾಸರಹಳ್ಳಿಯ ವಿನೋದ್‌ (25) ಹಾಗೂ ಕಿರಣ್‌ (28) ಎಂದು ಗುರುತಿಸಲಾಗಿದೆ. ಈ ನಾಲ್ವರು ಕುರುಬರಹಳ್ಳಿ ಕೆಂಪೇಗೌಡ ಆಟದ ಮೈದಾನದ ಬಳಿ ಶೇಖರಗೌಡ ಎಂಬುವರ ಮೇಲೆ ಹಲ್ಲೆ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ... ಕುಖ್ಯಾತ ರೌಡಿಶೀಟರ್‌ ‘ಸ್ಲಂ’ ಭರತ ಎನ್‌ಕೌಂಟರ್‌

 

ಬಂಧಿತರಾದ ಸುನಿಲ್‌, ವಿನೋದ್‌ ಹಾಗೂ ಕಿರಣ್‌ ಹಿಂದೆ ಶೇಖರಗೌಡ ಅವರ ಬಳಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಶೇಖರ್‌ಗೌಡ ಇವರನ್ನು ಕೆಲಸದಿಂದ ತೆಗೆದಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಈ ಆರೋಪಿಗಳು ದ್ವೇಷ ಸಾಧಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ... ನಟ ಯಶ್ ಹತ್ಯೆಗೂ ಸಂಚು ರೂಪಿಸಿದ್ದ ಸ್ಲಂ ಭರತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು