ಬೆಂಗಳೂರು: ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ವಿಧಾನಸೌಧಕ್ಕೆ ಎಲ್‌ಇಡಿ ವ್ಯವಸ್ಥೆ, ಪೊಲೀಸ್ ಆಯುಕ್ತರ ಕಚೇರಿ ಕಟ್ಟಡ ನವೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಣ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ರಸ್ತೆಗೆ ಸಿಂಹಪಾಲು. ನಂತರ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಸಿಲಿಕಾನ್‌ಸಿಟಿಗೆ ಮತ್ತಷ್ಟು ಐಟಿ ವ್ಯವಸ್ಥೆ ಕಲ್ಪಿಸಲು ನೂರಕ್ಕೂ ಹೆಚ್ಚು ಕೋಟಿ ವಿನಿಯೋಗಿಸಲಾಗುತ್ತಿದೆ. ಎಂದಿನಂತೆ ಶಿಕ್ಷಣಕ್ಕೆ ಮಾತ್ರ ಕೊನೆ ಆದ್ಯತೆ.

‘ಸ್ಮಾರ್ಟ್ ಸಿಟಿ’ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಸ್ತೆಗಳಿಂದ ಜನರು ಸಾಕಷ್ಟು ಸಂಕಷ್ಟ ಎದುರಿಸಿದರು. ರಸ್ತೆ ಕೆಲಸ ಮುಗಿದ ಮೇಲೆ ಎಲ್ಲ ‘ಯುಟಿಲಿಟಿ ಡಕ್ಟ್’ ಇರುತ್ತವೆ. ರಸ್ತೆ ಅಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಎಂದಿನಂತೆ ಇಲ್ಲೂ ಗುಂಡಿಗಳು ಕಾಣುತ್ತಿವೆ. ಅಲ್ಲಲ್ಲಿ ತೇಪೆ ಮಾಡಲಾಗಿದೆ. ಅಲ್ಲದೆ, ಒಳಚರಂಡಿ, ಬೆಸ್ಕಾಂನವರು ಎಂದು ರಸ್ತೆಯನ್ನು ಅಗೆಯುತ್ತಿದ್ದಾರೆ. ಇದಕ್ಕೆ ಕಸ್ತೂರಬಾ ರಸ್ತೆ ಉತ್ತಮ ಉದಾಹರಣೆ.

ನಗರದಲ್ಲಿ ₹930 ಕೋಟಿ ವೆಚ್ಚದಲ್ಲಿ 34 ಕಾಮಗಾರಿಗಳನ್ನು ‘ಸ್ಮಾರ್ಟ್ ಸಿಟಿ’ ಯೋಜನೆಯಲ್ಲಿ ನಿರ್ವಹಿಸಲಾಗುತ್ತಿದೆ. ಐದು ವರ್ಷದಲ್ಲಿ ಮುಗಿಯಬೇಕಿದ್ದ ಈ ಯೋಜನೆಗಳು ಇಂದೂ ಮರುಪರಿಶೀಲನೆ, ಹೊಸ ಸೇರ್ಪಡೆ, ಹಳೆಯದ್ದನ್ನು ಕೈಬಿಡುವ ಯೋಜನೆಗಳಾಗುತ್ತಿವೆ. ಕಬ್ಬನ್‌ಪಾರ್ಕ್‌ನಲ್ಲಿ ಕೆಲಸ ವಿಳಂಬವಾಗಿ ರುವುದಕ್ಕೆ ‘ಏನೋ ಒಂದು’ ಮಾಡಿ ಮುಗಿಸಿಬಿಡಬೇಕೆಂಬ ಆತುರವಿದೆ. ಒಂದು ವರ್ಷದಲ್ಲಿ ಮುಗಿಯಬೇಕಾದ ರಸ್ತೆಗಳು ಮೂರು ವರ್ಷವಾದರೂ ಇನ್ನೂ ಮುಗಿದಿಲ್ಲ. ಇತ್ತೀಚೆಗೆ ‘ಸ್ಮಾರ್ಟ್ ಸಿಟಿ’ ಯೋಜನೆಗೆ ಸೇರಿಕೊಂಡಿರುವ ಬಹುಅಂತಸ್ತಿನ ಕಾರ್ ಪಾರ್ಕಿಂಗ್, ಇವಿ ಚಾರ್ಚಿಂಗ್ ಸ್ಟೇಷ್ಟನ್ ಆರಂಭವೇ ಆಗಿಲ್ಲ. ಹೀಗಾಗಿ ‘ಸ್ಮಾರ್ಟ್ ಸಿಟಿ’ ಒಂದು ವರ್ಷ ಹೆಚ್ಚಿನ ಕಾಲಾವಕಾಶ ಪಡೆದು ಕೊಂಡರೂ 2023ರ ಅಂತ್ಯದವರೆಗೂ ಮುಗಿಯುವ ಲಕ್ಷಣಗಳಿಲ್ಲ.

ಐಸಿಸಿಸಿ: 14 ಇಲಾಖೆಗೆ ‘ಒಂದೇ ಸಹಾಯವಾಣಿ’

ನಗರದಲ್ಲಿರುವ 14 ಇಲಾಖೆಗಳ ಬಗ್ಗೆ ದೂರು ಅಥವಾ ಸಮಸ್ಯೆಯನ್ನು ಹೇಳಿಕೊಳ್ಳಲು ನಾಗರಿಕರಿಗೆ ಒಂದೇ ವೇದಿಕೆ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ನಿರ್ಮಾಣವಾಗುತ್ತಿದೆ. ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ‘ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್’ (ಐಸಿಸಿಸಿ) ಸ್ಥಾಪನೆಯಾಗಲಿದೆ. ಈ ಮೂಲಕ ಕರೆ, ಮೊಬೈಲ್ ಆ್ಯಪ್, ಆನ್‌ಲೈನ್ ವೆಬ್, ಕೈಬರಹಗಳಿಂದ ನಾಗರಿಕರು ದೂರು ಸಲ್ಲಿಸಬಹುದು. ಈ ದೂರುಗಳನ್ನು ಐಸಿಸಿಸಿ ಕೇಂದ್ರದಲ್ಲಿ ವಿಂಗಡಿಸಿ, ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ. ಅವರು ತೆಗೆದುಕೊಂಡ ಪರಿಹಾರವನ್ನು ನಾಗರಿಕರಿಗೆ ತಿಳಿಸಲಾಗುತ್ತದೆ. ಈಗ ಇಲಾಖೆಗಳಲ್ಲಿ ಪ್ರತ್ಯೇಕ ಕಂಟ್ರೋಲ್ ರೂಂಗಳಿವೆ. ಅವುಗಳೆಲ್ಲವನ್ನೂ ಒಟ್ಟುಗೂಡಿಸಿ ನಾಗರಿಕರಿಗೆ ‘ಏಕಗವಾಕ್ಷಿ’ ಕೇಂದ್ರದಂತೆ ಪರಿಹಾರ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಇದರ ಒಳಾಂಗಣ ವಿನ್ಯಾಸ ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಬಿಬಿಎಂಪಿಯ ಕಂಟ್ರೋಲ್‌ರೂಂ ಇಲ್ಲಿ ಕಾರ್ಯನಿರ್ವಹಿಸಬಹುದು. ಆದರೆ, 14 ಇಲಾಖೆಗಳ ಒಟ್ಟಾರೆ ದೂರುಗಳ ಸಂಪರ್ಕಕೊಂಡಿಯಾಗಲು ಸಾಕಷ್ಟು ತಿಂಗಳು ಬೇಕಾಗುತ್ತದೆ.

ಮಾರ್ಚ್‌ಗೆ ಶೇ 95 ಪೂರ್ಣ
‘ಸ್ಥಳೀಯರ ವಿರೋಧ ಹಾಗೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ವಿಳಂಬವಾಗಿರುವುದರಿಂದ ಕೆಲವು ಕಡೆ ಕಾಮಗಾರಿ ತಡವಾಗಿದೆ. ಸ್ಮಾರ್ಟ್ ಯೋಜನೆಗಳಲ್ಲಿ ಬಹುತೇಕ ಎಲ್ಲವೂ ಪೂರ್ಣಗೊಂಡಿವೆ. ಶಿಕ್ಷಣ, ಬಸ್, ಆರೋಗ್ಯ ಕ್ಷೇತ್ರ ಎಲ್ಲ ಯೋಜನೆಗಳನ್ನು ಕಾರ್ಯಗತವಾಗಿವೆ. ಮಾರ್ಚ್‌ನಲ್ಲಿ ಎಲ್ಲ ಕಾಮಗಾರಿಗಳು ಶೇ 95ರಷ್ಟು ಮುಗಿಯಲಿವೆ. ಇನ್ನು ಕೆಲವು ಯೋಜನೆಗಳು ಇದೀಗ ಸೇರ್ಪಡೆಯಾಗಿರುವುದರಿಂದ ಅವು ಸ್ವಲ್ಪ ತಡವಾಗಲಿವೆ’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಎನ್. ಸುಶೀಲಮ್ಮ್ ತಿಳಿಸಿದರು.

ಇ–ಚಾರ್ಜಿಂಗ್ ಸ್ಟೇಷನ್ಸ್
ಶೀಘ್ರ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ತಾಣ ಇ–ಚಾರ್ಜಿಂಗ್ ಸ್ಟೇಷನ್ಸ್. ವೈಫೈ, ಕಾಫಿ–ಲಾಂಜ್, ಚಾರ್ಜಿಂಗ್ ಹಬ್, ಬಯೊ–ಟಾಯ್ಲೆಟ್, ಸೋಲಾರ್ ರೂಫ್ ಒಳಗೊಂಡಿರುತ್ತದೆ. ₹17 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಂಟು ಸ್ಥಳಗಳಲ್ಲಿ ಈ ಸ್ಟೇಷನ್‌ಗಳನ್ನು ಸ್ಥಾಪಿಸುವ ಉದ್ದೇಶವಿತ್ತು. ಆದರೆ, ಇದಿನ್ನು ಅಂತಿಮಗೊಂಡಿಲ್ಲ. ಈ ಯೋಜನೆ ಕಾರ್ಯಗತವಾಗುತ್ತದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಾವ ಇಲಾಖೆಗಳು?

ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಟಿಸಿ, ನಮ್ಮ ಮೆಟ್ರೊ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಂಗಳೂರು ನಗರ ಪೊಲೀಸ್, ಬೆಸ್ಕಾಂ, ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಮತ್ತು ತುರ್ತು ಸೇವೆ, ರಾಜ್ಯ ಆರೋಗ್ಯ ಇಲಾಖೆ, ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ

ಸಂಕಷ್ಟ ಇನ್ನೂ ಮುಗಿದಿಲ್ಲ
‘ಸ್ಮಾರ್ಟ್ ಸಿಟಿ’ ಯೋಜನೆಯಲ್ಲಿ ಚೆನ್ನಾಗಿರುವುದನ್ನೆಲ್ಲ ಅಗೆದು ಮತ್ತೆ ಕಾಮಗಾರಿ ಮಾಡಿದ್ದಾರೆ. ವಿಐಪಿಗಳು ಓಡಾಡುತ್ತಾರೋ ಅಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಉಳಿದ ಕಡೆ ಇನ್ನೂ ಕಸವೇ ಇದೆ. ಅವೆನ್ಯೂ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆ. ಇಲ್ಲಿ ಜನ ಸಂಕಷ್ಟದಲ್ಲಿದ್ದರೂ ರಸ್ತೆ ಅಭಿವೃದ್ಧಿ ಮೂರು ವರ್ಷದಿಂದ ಮುಗಿದಿಲ್ಲ. ಇನ್ನು ಕಬ್ಬನ್‌ಪಾರ್ಕ್‌ನಲ್ಲಿ ಕೆಲವು ಒಳ್ಳೆಯ ಕೆಲಸ ಆಗಿದೆ. ಆದರೆ ವಿಳಂಬವಾಗಿದೆ. ಆದಷ್ಟು ಬೇಗ ಯೋಜನೆಗಳನ್ನು ಮುಗಿಸಿ, ಅವುಗಳು ಹಾಗೆಯೇ ಉಳಿಯುವಂತೆ ನೋಡಿಕೊಳ್ಳಬೇಕು.
-ಡಾ. ಉಮೇಶ್, ಅಧ್ಯಕ್ಷ, ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.