ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನ ತೀರ್ಥಕ್ಷೇತ್ರಗಳಿಗೆ ವಿಶೇಷ ರೈಲು

Published 18 ನವೆಂಬರ್ 2023, 16:28 IST
Last Updated 18 ನವೆಂಬರ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನ ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ತೆರಳಲು ಕರ್ನಾಟಕದಿಂದ ವಿಶೇಷ ಪ್ಯಾಕೇಜ್‌ ಅನ್ನು ಭಾರತೀಯ ರೈಲ್ವೆ ಮತ್ತು ಟ್ರಾವೆಲ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಟೂರಿಸಂ ಸಂಸ್ಥೆ ರೂಪಿಸಿದೆ.

11 ದಿನಗಳ ಈ ಪ್ಯಾಕೇಜ್‌ನಲ್ಲಿ ದ್ವಾರಕ, ಬ್ಯಾಟ್‌ ದ್ವಾರಕ, ಸೋಮನಾಥ ಜ್ಯೋತಿರ್ಲಿಂಗ, ನಿಷ್ಕಳಂಕ ಮಹಾದೇವ ಸಮುದ್ರ ದೇವಸ್ಥಾನ, ಉದಯಪುರನಾಥ  ದ್ವಾರಕ, ಕನ್ ಕೊರಳಿ  ದ್ವಾರಕ ಹಾಗೂ ಸರ್ದಾರ್ ವಲ್ಲಭ ಭಾಯ್‌ ಪಟೇಲ್‌ ಏಕತಾ ಪ್ರತಿಮೆ ಭೇಟಿಗಳನ್ನು ಒಳಗೊಂಡಿದೆ. 

ಪ್ಯಾಕೇಜ್‌ ವೆಚ್ಚ ₹19,050 ಆಗಿದ್ದು, ಯಲಹಂಕ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹುಬ್ಬಳ್ಳಿ, ಗದಗ, ಹೊಸಪೇಟೆ, ಬಳ್ಳಾರಿ ನಿಲ್ದಾಣಗಳಿಂದ ಪ್ರವಾಸಿಗರನ್ನು ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT