ಸೋಮವಾರ, ನವೆಂಬರ್ 28, 2022
20 °C

ಸಂತ ಫ್ರಾನ್ಸಿಸ್ ಕಾಲೇಜ್‌: ಅದ್ದೂರಿ ಕನ್ನಡ ರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ವಿದ್ಯಾರ್ಥಿಗಳಲ್ಲಿ "ಕನ್ನಡ ಉಳಿಸಿ ಕನ್ನಡ ಬೆಳೆಸಿ” ಎಂಬ ಘೋಷ ವಾಕ್ಯವನ್ನು ಉಚ್ಚರಿಸಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹರ್ಷೋದ್ಗಾರವನ್ನು ಉಂಟು ಮಾಡಿದರು.

ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ‘ಚಿನ್ನುಡಿ‘ ಕನ್ನಡ ಸಂಘ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ್‌ ಕುಮಾರ್.ಆರ್.ಎಂ ಹಾಗೂ ಸಹಪಾಠಿ ವೃಂದದವರ ಶ್ರಮದ ಪ್ರತಿಫಲವಾಗಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂತು.

ಡಾ.ಮಳಲಿಗೌಡ, ಡಾ.ಬೆಳಗೆರೆ ಲಿಂಗರಾಜಯ್ಯ, ಗೌರವಾನ್ವಿತ ಬ್ರದರ್ ಪೀಟರ್, ಪ್ರಾಂಶುಪಾಲರಾದ ಡಾ. ಆರ್ ಎನ್ ಸುಬ್ಬರಾವ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ್‌ ಕುಮಾರ್‌ ಆರ್.ಎಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು