ಬೆಂಗಳೂರು: ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಎಲೆಕ್ಟ್ರಿಷಿಯನ್ ಇರ್ಫಾನ್ (30) ಎಂಬುವರನ್ನು ಬುಧವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

‘ಶ್ರೀನಿವಾಸ್ ನಗರದ ಇರ್ಫಾನ್, ಪತ್ನಿಯನ್ನು ತೊರೆದು ಒಬ್ಬಂಟಿಯಾಗಿ ವಾಸವಿದ್ದರು. ಅವರ ಪತ್ನಿಯನ್ನು ಆಟೊ ಚಾಲಕ ತೌಸಿಫ್ ಎಂಬಾತ ಮದುವೆಯಾಗಿದ್ದ. ತೌಸಿಫ್‌ನೇ ಈ ಕೊಲೆ ಮಾಡಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕಾವಲ್‌ಭೈರಸಂದ್ರದ ಶಾಲೆಯೊಂದರ ಸಮೀಪ ರಾತ್ರಿ 11.30ರ ಸುಮಾರಿಗೆ ತೌಸಿಫ್ ನಿಂತುಕೊಂಡಿದ್ದ. ಅದೇ ಮಾರ್ಗವಾಗಿ ಇರ್ಫಾನ್ ಹೊರಟಿದ್ದರು. ಅವರಿಬ್ಬರು ಮುಖಾಮುಖಿ ಆಗುತ್ತಿದ್ದಂತೆ ಜಗಳ ಶುರುವಾಗಿತ್ತು. ತೌಸಿಫ್ ಚಾಕುವಿನಿಂದ ಇರ್ಫಾನ್ ಅವರ ಹೊಟ್ಟೆಗೆ ಇರಿದಿದ್ದ. ತೀವ್ರ ಗಾಯಗೊಂಡಿದ್ದ ಇರ್ಫಾನ್ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿ
ಸದೇ ಮೃತಪಟ್ಟರು. ಈ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.