ಮೈಸೂರು: ‘ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ಗೆಲುವನ್ನು ಆಚರಿಸಲು ಬಂದಿದ್ದ ಅಭಿಮಾನಿಗಳ ದುರಂತ ಸಾವು ಮತ್ತು ಗಾಯಗಳಾಗಿರುವುದನ್ನು ತಿಳಿದು ಆಘಾತವಾಗಿದೆ’ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಆರ್ಸಿಬಿ ತಂಡದ ಅಪಾರ ಬೆಂಬಲ, ಜನರ ಆಚರಣೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ ಸರಿಯಾಗಿ ನಿಭಾಯಿಸದೇ, ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ರೀತಿಯ ಘಟನೆ ನಡೆದಿದೆ’ ಎಂದು ದೂರಿದ್ದಾರೆ.

‘ಇದು ಕೇವಲ ಭದ್ರತಾ ವೈಫಲ್ಯವಲ್ಲ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ವೈಫಲ್ಯ. ರಾಜ್ಯ ಸರ್ಕಾರ ನಿಯೋಜಿತವಾಗಿ ಕಾರ್ಯನಿರ್ವಹಿಸಿ ಈ ದುರಂತವನ್ನು ತಡೆಯಬಹುದಿತ್ತು ಮತ್ತು ತಡೆಯಬೇಕಾಗಿತ್ತು’ ಎಂದು ಹೇಳಿದ್ದಾರೆ.

‘ಮೃತರ ಕುಟುಂಬಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ರಾಜ್ಯ ಸರ್ಕಾರವು ಈ ನಿರ್ಲಕ್ಷ್ಯಕ್ಕೆ ಉತ್ತರಿಸಬೇಕು ಹಾಗೂ ಈ ರೀತಿಯ ವೈಫಲ್ಯಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
.ಕಾಲ್ತುಳಿತ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಗೃಹಸಚಿವ ಪರಮೇಶ್ವರ ಭೇಟಿ, ಪರಿಶೀಲನೆ.ಏನು ಭದ್ರತೆ ಕೈಗೊಂಡಿದ್ರಿ? 'RCB ಕಾಲ್ತುಳಿತ'ದ ಬಗ್ಗೆ ಹೈಕೋರ್ಟ್ ಪಿಐಎಲ್ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.