ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ₹ 6 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

Published 24 ಆಗಸ್ಟ್ 2023, 21:25 IST
Last Updated 24 ಆಗಸ್ಟ್ 2023, 21:25 IST
ಅಕ್ಷರ ಗಾತ್ರ

ಯಲಹಂಕ: ‘ಗುತ್ತಿಗೆದಾರರಿಗೆ ಸರ್ಕಾರದಿಂದ ಪಾವತಿಯಾಗಬೇಕಾದ ಬಾಕಿ ಹಣ ಬಿಡುಗಡೆಯಾಗದ ಕಾರಣ, ಯಲಹಂಕದ ಮೇಲ್ಸೇತುವೆಗಳು ಮತ್ತು ಎನ್.ಇ.ಎಸ್. ವೃತ್ತದ ಮೂಲಕ ಹಳೆನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ಸೇರಿ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು. 

ಯಲಹಂಕ ಕ್ಷೇತ್ರವ್ಯಾಪ್ತಿಯ ನಾಗದಾಸನಹಳ್ಳಿ, ಹಾರೋಹಳ್ಳಿ ಹಾಗೂ ಶಿವಕೋಟೆ ಗ್ರಾಮಗಳಲ್ಲಿ ₹ 6 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ  ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಕಾಮಗಾರಿಗಳು ಸರಿಯಾಗಿ ನಡೆಯದ ಕಾರಣ ತನಿಖೆ ನಡೆಸಬೇಕು ಎಂಬ ಕಾರಣ ನೀಡಿ ಪ್ರಗತಿಯಲ್ಲಿದ್ದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ಎಚ್.ಬಿ. ಹನುಮಯ್ಯ, ಎಂ. ಸತೀಶ್, ಸತೀಶ್ ಕಡತನಮಲೆ, ಎಸ್.ಜಿ. ನರಸಿಂಹಮೂರ್ತಿ, ಟಿ. ಮುನಿರೆಡ್ಡಿ, ಡಿ.ಜಿ. ಅಪ್ಪಯಣ್ಣ, ಅದ್ದೆ ಮಂಜುನಾಥ ರೆಡ್ಡಿ, ನಾಗೇನಹಳ್ಳಿ ಶಿವಕುಮಾರ್, ವಿ.ವಿ. ರಾಮಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT