ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ರಾಜ್ಯ ಮಟ್ಟದ ನಾಲ್ಕನೇ ಅಧಿವೇಶನವನ್ನು ಜೂನ್ 7 ಮತ್ತು 8ರಂದು ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ.

ಪರಿಷದ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟೆ ಅವರನ್ನು ಅಧಿವೇಶನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ‘ಸಾಹಿತ್ಯದಲ್ಲಿ ಸತ್ವ ’ಎಂಬ ವಿಷಯದಡಿಯಲ್ಲಿ ಅಧಿವೇಶನ ನಡೆಯಲಿದೆ’ ಎಂದು ತಿಳಿಸಿದರು.

ಚಿಂತಕ ಪ್ರೇಮಶಂಕರ್ ಉದ್ಘಾಟಿಸುವರು. ಪರಿಷದ್ನಿಂದ ಪ್ರಕಟಗೊಳ್ಳುವ ಪುಸ್ತಕವನ್ನು ಸಾಹಿತಿ ಸಂಗಮೇಶ್ವರ ಸವದತ್ತಿಮಠ ಬಿಡುಗಡೆಗೊಳಿಸಲಿದ್ದಾರೆ. ‘ಸಾಹಿತ್ಯದಲ್ಲಿ ಸತ್ವ’ ಕುರಿತು ಎರಡು ದಿನ ಚರ್ಚೆ, ಸಂವಾದ, ಕವಿಗೋಷ್ಠಿಗಳು ನಡೆಯಲಿವೆ. ಅಧಿವೇಶನದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, 30 ಕ್ಕೂ ಅಧಿಕ ಮಳಿಗೆಗಳು ಇರಲಿವೆ. ರಾಜ್ಯದ ವಿವಿಧ ಕಡೆಗಳಿಂದ 4 ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆೆ ಇದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಪದಾಧಿಕಾರಿಗಳಾದ ಕಿಶೋರ್, ಚಂದ್ರಶೇಖರ್, ಶಾಂತಾ ನಾಗಮಂಗಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.