ಗುರುವಾರ , ಮೇ 26, 2022
23 °C
ಸುಚಿತ್ರ ಫಿಲ್ಮ ಸೊಸೈಟಿ ಭವಿಷ್ಯ ಡೋಲಾಯಮಾನ: ಆರೋಪ

ಸುಚಿತ್ರ ಫಿಲ್ಮ್ ಸೊಸೈಟಿ: ಇಂದು ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಚಿತ್ರ ಫಿಲ್ಮ್ ಸೊಸೈಟಿಯ ಭವಿಷ್ಯ ಅತಂತ್ರವಾಗುತ್ತಿದೆ. ಈ ಸಂಸ್ಥೆ ಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಇದೇ 14ರಂದು ಬೆಳಿಗ್ಗೆ 10.30ರಿಂದ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಸುಚಿತ್ರ ಟ್ರಸ್ಟ್‌ನ ಹುಟ್ಟಿಗೆ ಕಾರಣವಾದ ಸುಚಿತ್ರ ಫಿಲ್ಮ್ ಸೊಸೈಟಿಯು ಯಾವುದೇ ಅಡೆ ತಡೆ ಇಲ್ಲದೆಯೇ ಸುಚಿತ್ರ ಪ್ರಾಂಗಣದಲ್ಲಿ ಚಟುವಟಿಕೆ ನಡೆಸುವಂತಾಗಬೇಕು. ಫಿಲ್ಮ್ ಸೊಸೈಟಿಯ ಅಧ್ಯಕ್ಷರು ಟ್ರಸ್ಟ್‌ನ
ಶಾಶ್ವತ ಸದಸ್ಯರಾಗಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್‌ ಸೊಸೈಟಿಯ ಭವಿಷ್ಯ ಡೋಲಾಯಮಾನವಾಗಿದೆ. ಟ್ರಸ್ಟಿಗಳಲ್ಲಿ ಹೆಚ್ಚಿನ ಭಾಗ ಫಿಲ್ಮ್‌‌ ಸೊಸೈಟಿಯ ಸದಸ್ಯರೇ ಇದ್ದರು. ಆದರೆ, ಕಾರ್ಪೊರೇಟ್‌ ಹಿಡಿತಕ್ಕೆ ಸಿಲುಕುತ್ತಿರುವ ಸುಚಿತ್ರ ಟ್ರಸ್ಟ್‌, ಸೊಸೈಟಿಯ ಅಸ್ತಿತ್ವಕ್ಕೆ ಅಡ್ಡಿಪಡಿಸಲು ಹೊರಟಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.