ಸೋಮವಾರ, ಮೇ 17, 2021
23 °C

ಈಜು ಕೋಚ್ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈಜು ಮತ್ತು ಡೈವಿಂಗ್ ಕೋಚ್ ಶಿಲ್ಪಾ (41) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಾರೇನಹಳ್ಳಿ ನಿವಾಸಿಯಾಗಿದ್ದ ಶಿಲ್ಪಾ, ಪತಿ ನೀಲಕೃಷ್ಣ ಪ್ರಸಾದ್ ಜೊತೆ ವಾಸವಿದ್ದರು. ಶುಕ್ರವಾರ (ಏಪ್ರಿಲ್ 9) ಬೆಳಿಗ್ಗೆ ಪತಿ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಮನೆಯ ಕೊಠಡಿಯಲ್ಲಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಗರದ ಶಾಲೆಯೊಂದರಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ಅವರಿಗೆ ಏಕಲವ್ಯ ಪ್ರಶಸ್ತಿ ಸಹ ಸಿಕ್ಕಿತ್ತು. ಕಳೆದ ವರ್ಷ ಲಾಕ್ಡೌನ್‌ದಿಂದಾಗಿ ಶಾಲೆ ಬಂದ್ ಆಗಿ ಕೆಲಸ ಹೋಗಿತ್ತು. ಈ ವರ್ಷ ವಾಪಸು ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ. ನಾಲ್ಕು ತಿಂಗಳ ಹಿಂದಷ್ಟೇ ಶಿಲ್ಪಾ ಅವರ ತಾಯಿಯೂ ತೀರಿಕೊಂಡಿದ್ದರು.’

‘ಕೆಲಸ ಹೋಗಿದ್ದರಿಂದ ಹಾಗೂ ತಾಯಿ ತೀರಿಕೊಂಡಿದ್ದರಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾದ ಶಿಲ್ಪಾ ಈ ರೀತಿ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಮರಣ ಪತ್ರವೂ ಸಿಕ್ಕಿದ್ದು, ಪರಿಶೀಲಿಸಲಾಗುತ್ತಿದೆ. ಪತಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು