ಮಂಗಳವಾರ, ನವೆಂಬರ್ 12, 2019
28 °C

ಬೆಂಗಳೂರಿನ ಪ್ರೌಢಶಾಲಾ ಶಿಕ್ಷಕರಿಗೆ ಇಂದು ಮರು ಕೌನ್ಸೆಲಿಂಗ್‌

Published:
Updated:

ಬೆಂಗಳೂರು: 2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ‘ಎ’ ಪಟ್ಟಿಯಲ್ಲಿದ್ದು, ‘ಬಿ ಮತ್ತು ‘ಸಿ’ ವಲಯದಲ್ಲಿ ಹುದ್ದೆ ದೊರೆಯದ ಬೆಂಗಳೂರು ವಿಭಾಗದ 40 ಮಂದಿ ಪ್ರೌಢಶಾಲಾ ಶಿಕ್ಷಕರಿಗೆ ಶನಿವಾರ ಸಂಜೆ 4 ಗಂಟೆಗೆ ಕೆ. ಜಿ. ರಸ್ತೆಯ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಮರು ಕೌನ್ಸೆಲಿಂಗ್‌ ನಡೆಯಲಿದೆ.

ಶಿಕ್ಷಕರ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಹಾಜರಾಗಬೇಕು. ಉಪನಿರ್ದೇಶಕರ ಕಚೇರಿಯ ಒಬ್ಬ ಕಾರ್ಯ ನಿರ್ವಾಹಕರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

 

ಪ್ರತಿಕ್ರಿಯಿಸಿ (+)