ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕಿ ವಾಟ್ಸ್‌ಆ್ಯಪ್ ಹ್ಯಾಕ್: ಹಣ ವಂಚನೆ

Last Updated 1 ಮಾರ್ಚ್ 2023, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಸಾಫ್ಟ್‌ವೇರ್ ಎಂಜಿನಿಯರೊಬ್ಬರ ವಾಟ್ಸ್‌ಆ್ಯಪ್ ಹ್ಯಾಕ್ ಮಾಡಿ ಪರಿಚಯಸ್ಥರಿಗೆ ಸಂದೇಶ ಕಳುಹಿಸಿ ₹ 35 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾಗಸಂದ್ರ ನಿವಾಸಿಯಾಗಿರುವ 26 ವರ್ಷದ ಯುವತಿ, ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಗಾದ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿ, ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ಹೊಂದಿದ್ದಾರೆ. ಅಲ್ಲಿಯೇ ಅವರಿಗೆ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಸಂದೇಶ ಕಳಹಿಸಿದ್ದ ವ್ಯಕ್ತಿ, ಮೊಬೈಲ್ ಸಂಖ್ಯೆ ನೀಡುವಂತೆ ಕೋರಿದ್ದ. ಯುವತಿ, ಮೊಬೈಲ್ ಸಂಖ್ಯೆ ನೀಡಿದ್ದರು. ಇದಾದ ನಂತರವೇ ವಾಟ್ಸ್‌ಆ್ಯಪ್ ಹ್ಯಾಕ್ ಆಗಿರುವುದಾಗಿ ಯುವತಿ ದೂರಿದ್ದಾರೆ.’

‘ಹ್ಯಾಕ್ ಮಾಡಿದ್ದ ಯುವತಿಯ ವಾಟ್ಸ್‌ಆ್ಯಪ್‌ ಸಂಖ್ಯೆಯಿಂದ, ಅವರ ಪರಿಚಿತರಿಗೆ ಆರೋಪಿ ಸಂದೇಶ ಕಳುಹಿಸಿದ್ದ. ಆರ್ಥಿಕ ತೊಂದರೆ ಹಾಗೂ ಆರೋಗ್ಯ ಸಮಸ್ಯೆ ಇರುವುದಾಗಿ ಹೇಳಿ ₹ 35 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದ. ಈ ಸಂಗತಿ ತಿಳಿಯುತ್ತಿದ್ದಂತೆ ಯುವತಿ, ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT