ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯಕ್ಕಾಗಿ ಸೈಕಲ್‌' ರ‍್ಯಾಲಿ: ಸಂಸದರಾದ ತೇಜಸ್ವಿ ಸೂರ್ಯ, ಮುನಿಸ್ವಾಮಿ

ಸಂಸದರಾದ ತೇಜಸ್ವಿ ಸೂರ್ಯ, ಮುನಿಸ್ವಾಮಿ ಭಾಗಿ
Last Updated 27 ಮಾರ್ಚ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಪ್ರಯಕ್ತ ಏರ್ಪಡಿಸಲಾದ ‘ಸ್ವಾತಂತ್ರ್ಯಕ್ಕಾಗಿ ಸೈಕಲ್‌‘ ರ‍್ಯಾಲಿಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಎಸ್.ಮುನಿಸ್ವಾಮಿ ಅವರು ಭಾನುವಾರ ಸೈಕಲ್‌ ಸವಾರಿ ನಡೆಸಿದರು.

ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಕೆ.ವೈ. ವೆಂಕಟೇಶ್, ಪ್ಯಾರಾ ಅಥ್ಲೀಟ್ ಆನಂದ್ ಅವರುವಿಧಾನಸೌಧದ ಬಳಿ ಜಾಥಾ ಉದ್ಘಾಟಿಸಿದರು. ಸಂಸದ ತೇಜಸ್ವಿ ಸೂರ್ಯ ಅವರು ಸಂಗಡಿಗರೊಂದಿಗೆ ವಿಧಾನ ಸೌಧದಿಂದ ಕೋಲಾರದವರೆಗೆ ಸೈಕಲ್‌ನಲ್ಲಿ ಸಾಗಿದರು. ಇನ್ನೊಬ್ಬ ಸಂಸದ ಎಸ್.ಮುನಿಸ್ವಾಮಿ ಅವರು ನರಸಾಪುರದಲ್ಲಿ ಜಾಥಾವನ್ನು ಸೇರಿಕೊಂಡರು.

‘ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಈ ಕರೆಯ ಮೇರೆಗೆ ವಿಶ್ವ ಯೋಗ ದಿನಾಚರಣೆ, ಫಿಟ್ ಇಂಡಿಯಾದಂತಹ ಅನೇಕ ಅಭಿಯಾನಗಳನ್ನು ಕೈಗೊಳ್ಳಲಾಗಿದೆ. ಇವುಗಳಿಂದ ಕ್ರೀಡೆ ಮತ್ತು ಸದೃಢ ಆರೋಗ್ಯ ವೃದ್ಧಿಗೆ ಸಾಕಷ್ಟು ಉತ್ತೇಜನ ದೊರಕಿದೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

‘ಇಂತಹ ಅಭಿಯಾನಗಳು ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಪೂರಕ’ ಎಂದು ಎಸ್.ಮುನಿಸ್ವಾಮಿ ತಿಳಿಸಿದರು.

ಸೈಕಲ್‌ ಜಾಥಾ ಮೂಲಕ 75 ಕಿ.ಮೀ ದೂರವನ್ನು ಕ್ರಮಿಸಲಾಗಿದೆ. 750 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಡೆಕಥ್ಲಾನ್, ಫಾಸ್ಟ್ ಅಂಡ್ ಅಪ್, ಜಯಂತ್ ಪ್ರೊ ಬೈಕ್ಸ್, ಬೆಂಗಳೂರು ರಾ೦ಡೋನಿಯರ್ಸ್, ರೆಕಾರ್ಡ್ ಮತ್ತು ನಿತ್ಯ ನಿರಂತರ ಸೇವಾ ಟ್ರಸ್ಟ್‌ಗಳು ಜಾಥಾಕ್ಕೆ ಸಹಯೋಗ ನೀಡಿವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT