ಬೆಂಗಳೂರು: ಭಾರತೀಯ ವಾಯುಪಡೆಯ ಟ್ರೈನಿಂಗ್ ಕಮಾಂಡ್‌ನ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಆಗಿ ಏರ್ ಮಾರ್ಷಲ್ ತೇಜ್‌ಬೀರ್ ಸಿಂಗ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
1988ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಫ್ಲೈಯಿಂಗ್ ವಿಭಾಗದಲ್ಲಿ ಸಿಂಗ್ ಅವರನ್ನು ನಿಯೋಜಿಸಲಾಯಿತು ಮತ್ತು 7,000 ಗಂಟೆಗಳಿಗಿಂತ ಹೆಚ್ಚು ಹಾರಾಟ ನಡೆಸಿದ್ದಾರೆ. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನ ಹಳೆಯ ವಿದ್ಯಾರ್ಥಿ ಎಂದು ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ತಮ್ಮ 36 ವರ್ಷಗಳ ವೃತ್ತಿ ಜೀವನದಲ್ಲಿ ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿ ವಿಭಾಗಗಳನ್ನು ನಿರ್ವಹಿಸಿದ್ದಾರೆ. ವಿಶಿಷ್ಟ ಸೇವೆಯನ್ನು ಗುರುತಿಸಿ ತೇಜ್‌ಬೀರ್ ಅವರಿಗೆ 2018 ರಲ್ಲಿ ಅತಿ ವಿಶಿಷ್ಟ ಸೇವಾ ಪದಕವನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿದ್ದರು.