ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿತಿಯಲ್ಲಿರುವ ರಸ್ತೆ ಅಭಿವೃದ್ಧಿಗೆ ಟೆಂಡರ್‌!

ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಳಿಸಲು ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ * ಟಿವಿಸಿಸಿಯಿಂದ ತನಿಖೆ
Last Updated 13 ಅಕ್ಟೋಬರ್ 2020, 15:16 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಜೆ.ಪಿ.ನಗರ ಹಾಗೂ ಸಾರಕ್ಕಿ ವಾರ್ಡ್‌ಗಳಲ್ಲಿ ಇತ್ತೀಚೆಗಷ್ಟೇ ಅಭಿವೃದ್ಧಿಗೊಂಡು ಸುಸ್ಥಿತಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಮತ್ತೆ ಟೆಂಡರ್‌ ಕರೆಲಾಗಿದೆ. ಈ ಟೆಂಡರ್‌ ಪ್ರಕ್ರಿಯೆ ತಡೆ ಹಿಡಿಯುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಸೂಚಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆಯುಕ್ತರ ಅಧೀನದ ತಾಂತ್ರಿಕ ಜಾಗೃತ ಕೋಶಕ್ಕೆ (ಟಿವಿಸಿಸಿ) ಆಡಳಿತಾಧಿಕಾರಿ ಸೂಚಿಸಿದ್ದಾರೆ.

ಜೆ.ಪಿ.ನಗರ ಹಾಗೂ ಸಾರಕ್ಕಿ ವಾರ್ಡ್‌ಗಳ 10 ರಸ್ತೆಗಳನ್ನು ಒಟ್ಟು ₹ 7.94 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಜಯನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು ಸೆ.21ರಂದು ಅಲ್ಪಾವಧಿ ಟೆಂಡರ್‌ ಕರೆದಿದ್ದರು. ಟೆಂಡರ್‌ ಅರ್ಜಿ ಸಲ್ಲಿಸುವುದಕ್ಕೆ ಸೋಮವಾರ (ಅ.12) ಕೊನೆಯ ದಿನವಾಗಿತ್ತು.

‘ಈ ರಸ್ತೆಗಳನ್ನು ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಲಾಗಿದ್ದು, ಕಾಮಗಾರಿಗಳು 2020ರ ಫೆಬ್ರುವರಿಯಲ್ಲಷ್ಟೇ ಪೂರ್ಣಗೊಂಡಿವೆ. ಇವುಗಳನ್ನು ಮತ್ತೆ ಅಭಿವೃದ್ಧಿ ಪಡಿಸುವುದು ಸಾರ್ವಜನಿಕ ಹಣ ಪೋಲು ಮಾಡಿದಂತೆ’ ಎಂದು ಆರೋಪಿಸಿ ಬಿಜೆಪಿ ನಗರ ದಕ್ಷಿಣ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಿಬಿಎಂಪಿ ಆಡಳಿತಾಧಿಕಾರಿಗೆ ಹಾಗೂ ಆಯುಕ್ತ ಎನ್‌.ಮಂಜುನಾಥ್‌ ಅವರಿಗೆ ದೂರು ನೀಡಿದ್ದರು.

ಅಭಿವೃದ್ಧಿಗೆ ಟೆಂಡರ್‌ ಕರೆದಿರುವ ರಸ್ತೆಗಳು

ವಾರ್ಡ್‌;ಕಾಮಗಾರಿ; ಅಂದಾಜು ವೆಚ್ಚ (₹ ಲಕ್ಷಗಳಲ್ಲಿ)

ಜೆ.ಪಿ.ನಗರ; ರಾಗಿಗುಡ್ಡ ಕೊಳೆಗೇರಿಯ 1ನೇ, 2ನೇ ಮತ್ತು 3ನೇ ಅಡ್ಡ ರಸ್ತೆಯಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ನಿರ್ಮಾಣ; 99

ಜೆ.ಪಿ.ನಗರ; ರಾಗಿಗುಡ್ಡ ಕೊಳೆಗೇರಿಯ ನಾಲ್ಕನೇ ಮುಖ್ಯರಸ್ತೆ ಮತ್ತು ಅಡ್ಡ ರಸ್ತೆಗಳಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ನಿರ್ಮಾಣ; 98

ಜೆ.ಪಿ.ನಗರ; ಜೆ.ಪಿ.ನಗರ ಎರಡನೇ ಹಂತದಲ್ಲಿ ಮಾರೇನಹಳ್ಳಿಪಾಳ್ಯದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮತ್ತು ಚರಂಡಿ ಅಭಿವೃದ್ಧಿ; 99

ಜೆ.ಪಿ.ನಗರ; ಮಾರೇನಹಳ್ಳಿಯಲ್ಲಿ ರಾಗಿಗುಡ್ಡ ಕೊಳೆಗೇರಿಯ ಪಶ್ಚಿಮ ಭಾಗದಲ್ಲಿ ಒಳಚರಂಡಿ, ಕುಡಿಯುವ ನೀರಿನ ಕೊಳವೆ ಅಳವಡಿಕೆ; 99

ಜೆ.ಪಿ.ನಗರ; ರಾಗಿಗುಡ್ಡ ಕೊಳೆಗೇರಿಯ 3ನೇ ಮುಖ್ಯರಸ್ತೆ ಮತ್ತು ಅಡ್ಡರಸ್ತೆಯಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ; 99

ಸಾರಕ್ಕಿ; ಜೆ.ಪಿ.ನಗರ 6ನೇ ಹಂತದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಸುತ್ತಮುತ್ತ ರಸ್ತೆಗಳ ಹಾಗೂ ಚರಂಡಿಗಳ ಅಭಿವೃದ್ಧಿ; 62.50

ಸಾರಕ್ಕಿ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮತ್ತು ಚರಂಡಿ ಅಭಿವೃದ್ಧಿ; 62.50

ಅಣ್ಣಯ್ಯಪ್ಪ ಬಡಾವಣೆಯಲ್ಲಿ ಮತ್ತು ಸುತ್ತಮುತ್ತ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿ; 62.50

ಜೆ.ಪಿ.ನಗರ 5ನೇ ಹಂತದಲ್ಲಿ 17ನೇ ಮತ್ತು 18ನೇ ಅಡ್ಡರಸ್ತೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ; 62.50

ಪಟಾಲಮ್ಮ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ; 50.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT