ಬೆಂಗಳೂರು: ಭೌಗೋಳಿಕ ಅಸ್ಥಿರತೆ, ಬಲಗೊಳ್ಳುತ್ತಿರುವ ರಕ್ಷಣಾತ್ಮಕ ನೀತಿ ಮತ್ತು ಬದಲಾಗುತ್ತಿರುವ ಮೈತ್ರಿಗಳು ವಿಚಾರಗಳನ್ನು ಇಟ್ಟುಕೊಂಡು ಚಾಣಕ್ಯ ವಿಶ್ವವಿದ್ಯಾಲಯವು ‘ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ: ಯೂರೋಪ್ ಮತ್ತು ಭಾರತದಿಂದೊಂದು ದೃಷ್ಟಿಕೋನ’ ‘ಚಾಣಕ್ಯ ಸಂವಾದ’ ವಿಚಾರ ವಿನಿಮಯ ಕಾರ್ಯಕ್ರಮವನ್ನು ನಡೆಸಿತು.

ಹ್ಯಾಂಬರ್ಗ್ ವಿಶ್ವವಿದ್ಯಾಲಯದ ವ್ಯಾಪಾರ, ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಪೀಠದ ಡೀನ್ ಕೋರ್ಟ್ ಜಾಕೋಬೈಟ್ ದಿಕ್ಸೂಚಿ ಭಾಷಣ ಮಾಡಿದರು. ಯೂರೋಪಿಯನ್ ದೃಷ್ಟಿಕೋನದಿಂದ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳು, ಜಾಗತಿಕ ವ್ಯಾಪಾರದ ಸಂಕಷ್ಟ, ಬಹುಪಕ್ಷೀಯತೆಯ ಅನಿರೀಕ್ಷಿತ ಸ್ವಭಾವ ಮತ್ತು ಅನಿಶ್ಚಿತತೆಯ ನಡುವೆಯೂ ಭಾರತ-ಯೂರೋಪ್ ನಡುವಿನ ಸಹಕಾರದ ಸಾಧ್ಯತೆಗಳನ್ನು ಅವರು ವಿವರಿಸಿದರು.

ಕಲಾ, ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಸಹ ಪ್ರಾಧ್ಯಾಪಕ ಸೌರವ್ ಶರ್ಮಾ ಅವರು ಭಾರತವು ಎದುರಿಸುತ್ತಿರುವ ಜಾಗತಿಕ ಅನುಭವಗಳು ಮತ್ತು ಅದರ ರೂಪಾಂತರಗೊಳ್ಳುತ್ತಿರುವ ಜಾಗತಿಕ ಸ್ಥಾನವನ್ನು ವಿವರಿಸಿದರು. ಪತ್ರಕರ್ತೆ ಶಾಂತಲಾ ಧರ್ಮರಾಜ್ ಅವರು ಭಾರತೀಯ ಮಾಧ್ಯಮಗಳಲ್ಲಿ ಜಾಗತಿಕ ರಾಜಕೀಯದ ವರದಿ ಮತ್ತು ವಿಶ್ಲೇಷಣೆಯ ಮೇಲೆ ಬೆಳಕು ಚೆಲ್ಲಿದರು.

ಕಲಾ, ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಸಹ ಪ್ರಾಧ್ಯಾಪಕರಾದ ಚಾರು ರತನ್ ದುಬೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.