ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಪಕ್ಷಗಳ ಡಿಜಿಟಲ್‌ ಪೋಸ್ಟರ್‌ ತಂದ ಸಮಸ್ಯೆ

‘ಅಭಿಮಾನಿಗಳ ಮನೆಗಳಿಗೆ ಅಂಟಿಸಿಕೊಳ್ಳಲಿ’
Last Updated 30 ಜನವರಿ 2023, 19:37 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳು ಈ ಬಾರಿ ಚುನಾವಣಾ ಪ್ರಚಾರಕ್ಕಾಗಿ ಡಿಜಿಟಲ್‌ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದು, ಇದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಮಾಮೂಲಿ ಕಾಗದದ ಪೋಸ್ಟರ್‌ಗಳ ಬದಲಿಗೆ ಡಿಜಿಟಲ್‌ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರ ಮತ್ತು ಪಕ್ಷದ ಅಭಿಮಾನಿಗಳ ಮನೆಗಳಿಗೆ ಅಂಟಿಸುವುದರ ಜತೆಗೆ ಇತರರ ಮನೆಗಳಿಗೂ ಅನುಮತಿ ಇಲ್ಲದೆ ಅಂಟಿಸುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿಯು ಮನೆ–ಮನೆಗಳಿಗೆ ಡಿಜಿಟಲ್‌ ಪೋಸ್ಟರ್‌ಗಳನ್ನು ಅಂಟಿಸಲಾರಂಭಿಸಿದೆ.

ಈ ಸಮಸ್ಯೆಯ ಕುರಿತು ಸಂಜಯನಗರದ ಬಡಾವಣೆಯ ನಿವಾಸಿಯೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಅನುಮತಿ
ಇಲ್ಲದೇ ನಮ್ಮ ಮನೆಯ ಮೇಲೆ ಪೋಸ್ಟರ್‌ ಅಂಟಿಸಿ ಹೋಗಿದ್ದಾರೆ. ಇತ್ತೀಚೆಗಷ್ಟೇ ಮನೆಯ ಗೋಡೆಗೆ ಬಣ್ಣ ಬಳಿಯಲಾಗಿತ್ತು. ಅದರ ಮೇಲೆಯೇ ಅಂಟಿಸಿದ್ದಾರೆ. ಪೋಸ್ಟರ್‌ ತೆಗೆಯಲು ಹೋಗಿ ಬಣ್ಣ ಕಿತ್ತು ಬರುತ್ತಿದೆ’ ಎಂದು ದೂರಿದರು.

‘ನಾವು ಯಾವುದೇ ಪಕ್ಷದ ವಿರುದ್ಧವಿಲ್ಲ. ಪ್ರಚಾರ ಕಾರ್ಯ ಮಾಡಿಕೊಳ್ಳಲಿ. ಅವರ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳ ಮನೆಗೆ ಅಂಟಿಸಲಿ. ಉಳಿದವರ ಮನೆಗೆ ಅಂಟಿಸುವುದು ಸರಿಯಲ್ಲ. ಗೇಟ್‌ಗಳಿಗೆ ನೋ ಪಾರ್ಕಿಂಗ್ ಮಾದರಿಯ ಪುಟ್ಟ ಬೋರ್ಡ್‌ ಹಾಕಿದರೆ, ಇಷ್ಟ ಇದ್ದವರು ಇಟ್ಟುಕೊಳ್ಳುತ್ತಾರೆ. ಇಲ್ಲದವರು ತೆಗೆಯುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT