ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕಳ್ಳತನ ಪ್ರಕರಣ: ಬೆರಳಚ್ಚಿನಿಂದ ಸಿಕ್ಕಿಬಿದ್ದ ಆರೋಪಿ

Published 29 ಫೆಬ್ರುವರಿ 2024, 15:33 IST
Last Updated 29 ಫೆಬ್ರುವರಿ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿ ಕಾಂತರಾಜ್ ಅಲಿಯಾಸ್ ಮೋರಿಕಾಂತ್ (47) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸುಂಕದಕಟ್ಟೆ ಚಂದನ ಬಡಾವಣೆಯ ಕಾಂತರಾಜ್, ಅಪರಾಧ ಹಿನ್ನೆಲೆಯುಳ್ಳವ. ಕೃತ್ಯ ಎಸಗಿದ್ದ ಈತನನ್ನು ಬೆರಳಚ್ಚು ನೀಡಿದ್ದ ಸುಳಿವು ಆಧರಿಸಿ ಸೆರೆ ಹಿಡಿಯಲಾಗಿದೆ. ಇನ್ನೊಬ್ಬ ಆರೋಪಿ ಚಿಕ್ಕಮಗಳೂರಿನ ದುಬೈ ನಗರದ ಯತೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಮಹೇಶ್‌ಕುಮಾರ್ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೇರೆ ಊರಿಗೆ ಹೋಗಿದ್ದರು. ಬೀಗ ಹಾಕಿದ್ದ ಮನೆ ಗುರುತಿಸಿದ್ದ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಬೀಗ ಮುರಿದು ಒಳನುಗ್ಗಿದ್ದ ಅವರಿಬ್ಬರು, 50 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ಸಾಮಗ್ರಿ ಹಾಗೂ ₹ 35,000 ನಗದು ಕದ್ದೊಯ್ದಿದ್ದರು’ ಎಂದು ತಿಳಿಸಿದರು.

‘ಆರೋಪಿ ಕಾಂತರಾಜ್ ಈ ಹಿಂದೆಯೂ ಮನೆಗಳಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದು ಪುನಃ ಕೃತ್ಯ ಎಸಗಲಾರಂಭಿಸಿದ್ದ. ದೂರುದಾರ ಮಹೇಶ್‌ಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆಗ ಆರೋಪಿಯ ಬೆರಳಚ್ಚು ಸಿಕ್ಕಿತ್ತು. ಕಾಂತರಾಜ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ’ ಎಂದು ಹೇಳಿದರು.

‘ಆರೋಪಿಯಿಂದ ₹3.50 ಲಕ್ಷ ಮೌಲ್ಯದ 46 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ. ಈತನ ಬಂಧನದಿಂದ 2 ಪ್ರಕರಣಗಳೂ ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT