ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Published 30 ಆಗಸ್ಟ್ 2023, 15:38 IST
Last Updated 30 ಆಗಸ್ಟ್ 2023, 15:38 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ರಾಯರಪಾಳ್ಯದ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ದುಷ್ಕರ್ಮಿಗಳು, ಬೀರುವಿನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

ಸಿದ್ದಪ್ಪ ಅವರ ಮನೆಯಲ್ಲಿ ಕಳವು ನಡೆದಿದೆ. ಮನೆಯೊಡತಿ ರಂಗಮ್ಮ ಅವರ ಶಸ್ತ್ರಚಿಕಿತ್ಸೆಗೆಂದು ಇಟ್ಟಿದ್ದ ₹ 50 ಸಾವಿರ ಹಣ ಹಾಗೂ ಎರಡು ಜೊತೆ ಓಲೆ ಕದ್ದೊಯ್ದಿದ್ದಾರೆ.

‘ಮಕ್ಕಳು ಕೆಲಸಕ್ಕೆ ತೆರಳಿದ್ದರು. ಅಜ್ಜ–ಅಜ್ಜಿ ದನಗಳನ್ನು ಮೇಯಿಸಲು ಹೋಗಿದ್ದರು. ಆಗ ಕಳವು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ದಾಬಸ್‌ಪೇಟೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT