ಬೆಂಗಳೂರು: ‘ನಿಮ್ಮ ರಾಸಲೀಲೆಯ ಸಿ.ಡಿ ನಮ್ಮ ಬಳಿ ಇದೆ. ನಾವು ಹೇಳಿದಂತೆ ಕೇಳದಿದ್ದರೆ ಅದನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುವಂತೆ ಮಾಡುತ್ತೇವೆ’ ಎಂದು ನಾಲ್ವರು ಅಪರಿಚಿತರು, ವಿಧಾನಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ.

ಆ ಸಂಬಂಧ ರಘು ಆಚಾರ್ ಅವರು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ನಾಲ್ವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಆರೋಪಿಗಳು, ಅಂತರ್ಜಾಲದ ಮೂಲಕ ಕರೆ ಮಾಡಿ ಬೆದರಿಸಿರುವುದು ಗೊತ್ತಾಗಿದೆ. ಅವರು ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು.

ದೂರಿನ ವಿವರ: ‘ನಾಲ್ವರು ಅಪರಿಚಿತರು, ಡಿ. 4ರಿಂದ 7ರವರೆಗಿನ ಅವಧಿಯಲ್ಲಿ ನನ್ನ ಮೊಬೈಲ್‌ಗೆ ಕರೆ ಮಾಡಿದ್ದರು. ‘ನಾವು ಹೇಳಿದ ಹಾಗೇ ಕೇಳಬೇಕು. ಇಲ್ಲದಿದ್ದರೆ, ನಿಮ್ಮ ಕೆಲವು ವಿಡಿಯೊ ತುಣುಕುಗಳು ನಮ್ಮ ಬಳಿ ಇವೆ. ಅವುಗಳನ್ನು ಅಶ್ಲೀಲ ವಿಡಿಯೊಗಳಾಗಿ ಪರಿವರ್ತಿಸಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುವಂತೆ ಮಾಡುತ್ತೇವೆ’ ಎಂಬುದಾಗಿ ಬೆದರಿಕೆ ಹಾಕಿದ್ದರು’ ಎಂದು ರಘು ಆಚಾರ್, ದೂರಿನಲ್ಲಿ ತಿಳಿಸಿದ್ದಾರೆ.

‘ಬೆಳ್ಳಂದೂರಿನಲ್ಲಿರುವ ನನ್ನ ಕಚೇರಿಗೂ ಮುತ್ತಿಗೆ ಹಾಕಿ ರಾಜಕೀಯ ಜೀವನವನ್ನು ಹಾಳು ಮಾಡುತ್ತೇವೆಂದು ಅಪರಿಚಿತರು ಬೆದರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.