ಬೆಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಆನೆ ದಂತಗಳನ್ನು ಸಾಗಿಸುತ್ತಿದ್ದ ಮೂವರನ್ನು ರಾಜನುಕುಂಟೆ ಸಮೀಪದ ಸಾದರಹಳ್ಳಿ ಬಳಿ ಬಂಧಿಸಿದ್ದಾರೆ.
ಮೋಹನ್, ಆನಂದ್ ಹಾಗೂ ವಿನೋದ್ ಬಂಧಿತ ಆರೋಪಿಗಳು. ಬಂಧಿತರಿಂದ 8.5 ಕೆ.ಜಿ. ಮತ್ತು 9 ಕೆ.ಜಿ ತೂಕದ ಎರಡು ಆನೆ ದಂತಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗಳು ತೆರಳುತ್ತಿದ್ದ ವಾಹನ ತಡೆದು ತಪಾಸಣೆ ನಡೆಸಿದರು. ‘ಎರಡು ಆನೆ ದಂತಗಳು ಪತ್ತೆಯಾಗಿವೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.