ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದ್ದು, ಇನ್ನು ಮೂರು ದಿನ ತುಂತುರು ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೊಸಕೋಟೆ, ಕೆ.ಆರ್.ಪುರ, ಯಲಹಂಕ, ಲಾಲ್ಬಾಗ್, ನಾಯಂಡಹಳ್ಳಿ, ಯಶವಂತಪುರ, ಜಯನಗರ, ಶಾಂತಿನಗರ, ವರ್ತೂರು ಸೇರಿದಂತೆ ಹಲವೆಡೆ ತುಂತುರು ಮಳೆಯಿಂದ ಸಂಚಾರ ದಟ್ಟಣೆ ಉಂಟಾಯಿತು.

ಚಾಲುಕ್ಯ ವೃತ್ತ, ಓಕಳೀಪುರ ಜಂಕ್ಷನ್, ಕೆಂಪೇಗೌಡ ಬಸ್ ನಿಲ್ದಾಣದ ಬಳಿಯ ಅಂಡರ್ ಪಾಸ್ ಸೇರಿದಂತೆ ಕೆಲ ಸೇತುವೆಗಳು ನೀರಿನಿಂದ ತುಂಬಿಕೊಂಡವು. ವಾಹನ ಸವಾರರು ಅದರಲ್ಲೇ ಸಂಚರಿಸಿದರು.

ಎಲ್ಲೆಲ್ಲಿ ಎಷ್ಟು ಮಳೆ: ಬೆಟ್ಟದ ಹಲಸೂರಿನಲ್ಲಿ 44 ಮಿ.ಮೀ ಮಳೆ ಬಿದ್ದಿದ್ದು, ರಾಜಾನುಕುಂಟೆ 32 ಮಿ.ಮೀ, ದೊಡ್ಡಜಾಲ 30, ಸೋನಪ್ಪನಹಳ್ಳಿ 28.5, ಹುಣಸಮಾರನಹಳ್ಳಿ 23.5, ಗೊರಗುಂಟೆಪಾಳ್ಯ 21, ಯಲಹಂಕ 17.5, ಚೌಡೇಶ್ವರಿ 14.5, ಕೊಡಿಗೆಹಳ್ಳಿ 14, ಮಾಚೋಹಳ್ಳಿ 10, ವರ್ತೂರು 7.5, ಕೆ.ಆರ್.ಪುರ 5, ಹೊಸನಗರ 4, ಕಗ್ಗಲೀಪುರ, ದೊಡ್ಡನೆಕ್ಕುಂದಿ, ಬೇಗೂರಿನಲ್ಲಿ 3 ಮಿ.ಮೀ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.