ಮಂಗಳವಾರ, ಜುಲೈ 27, 2021
25 °C

ಮಾವು ಸಾಗಿಸುತ್ತಿದ್ದ ಟ್ರಕ್ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲಾರದಿಂದ ಮಹಾರಾಷ್ಟ್ರಕ್ಕೆ ಮಾವಿನಹಣ್ಣು ಸಾಗಿಸುತ್ತಿದ್ದ ಟ್ರಕ್ ಸುಲಿಗೆ ಮಾಡಿದ್ದ ಆರೋಪದಡಿ ಸಾದಿಕ್ ಪಾಷಾ ಎಂಬಾತನನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ನಾಗವಾರ ನಿವಾಸಿ ಸಾದಿಕ್, ತನ್ನಿಬ್ಬರು ಸಹಚರರ ಜೊತೆ ಸೇರಿ ಕೃತ್ಯ ಎಸಗಿದ್ದ. ಆತನಿಂದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಟ್ರಕ್ ಚಾಲಕ ಶಿವಾಜಿ, ಕೋಲಾರ ದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನಹಣ್ಣುಗಳನ್ನು ತುಂಬಿಸಿಕೊಂಡು ಮಹಾರಾಷ್ಟ್ರದತ್ತ ಹೊರಟಿದ್ದರು. ನಾಗವಾರ ಮುಖ್ಯರಸ್ತೆ ಸಮೀಪದಲ್ಲಿ ಆಟೊದಲ್ಲಿ ಬಂದಿದ್ದ ಆರೋಪಿಗಳು, ಟ್ರಕ್ ಅಡ್ಡಗಟ್ಟಿದ್ದರು. ಚಾಕು ತೋರಿಸಿ ಶಿವಾಜಿ ಮೇಲೆ ಹಲ್ಲೆ ಮಾಡಿದ್ದರು. ಕೈ ಕಾಲು ಕಟ್ಟಿಹಾಕಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡಿದ್ದರು. ನಂತರ, ಟ್ರಕ್ ಸಮೇತ ಪರಾರಿಯಾಗಿದ್ದರು.’ ‘ಕೈ ಮತ್ತು ಕಾಲಿಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡಿದ್ದ ಶಿವಾಜಿ, ಸ್ಥಳೀಯರೊಬ್ಬರ ನೆರವಿನಿಂದ ಠಾಣೆಗೆ ಬಂದು ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಆರೋಪಿಗಳು ಕೆ.ಆರ್.ಪುರ ಬಳಿ ಇರುವುದು ಗೊತ್ತಾಗಿತ್ತು. ಸ್ಥಳಕ್ಕೆ ಹೋಗಿ ಸಾದಿಕ್‌ನನ್ನು ಬಂಧಿಸ ಲಾಯಿತು. ಇನ್ನಿಬ್ಬರು ಪರಾರಿಯಾದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು